ಎಸ್ಸೆಲ್ ಕರ್ನಾಟಕ ಶ್ರೇಷ್ಠ ಕ್ರೀಡಾ ಪಟು ಪ್ರಶಸ್ತಿ ಪ್ರಕಟ

ಬೆಂಗಳೂರು, ಫೆ.18: ಎಸ್ಸೆಲ್ ಕರ್ನಾಟಕ ಶ್ರೇಷ್ಠ ಕ್ರೀಡಾ ಪಟು ಪ್ರಶಸ್ತಿಯನ್ನು ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಹೆಲೆನ್ ಮೇರಿ ಅವರಿಗೆ ನೀಡಿ ಗೌರವಿಸಲಾತು. ಅಂತಿಮ ಸುತ್ತಿಗೆ ಆಯ್ಕೆಯಾದ ಐವರು ಕ್ರೀಡಾ ಪಟುಗಳಲ್ಲಿ ಕರ್ನಾಟಕದ ಜನತೆ ಮೇರಿ ಅವರನ್ನು ಎಸ್ಸೆಮ್ಮೆಸ್ ಮತ್ತು ಟೆಲಿ ವೊಟಿಂಗ್ ಮೂಲಕ ಆಯ್ಕೆ ಮಾಡಿದೆ.

ರಾಷ್ಟ್ರೀಯ ಬ್ಯಾಡ್‌ಮಿಂಟನ್ ಚಾಂಪಿಯನ್ ಅನುಪ್ ಶ್ರೀಧರ್, ವಿಶ್ವ ಮಹಿಳಾ ಬಿಲಿಯರ್ಡ್ಸ್ ಚಾಂಪಿಯನ್ ಚೈತ್ರಾ ಮಗಿಮೈರಾಜ್, ವಿಶ್ವ ಯುವ ಚೆಸ್ ಚಾಂಪಿಯನ್ ಗಿರೀಶ್ ಕೌಶಿಕ್ ಮತ್ತು ಓಲಂಪಿಕ್ ಈಜುಗಾರ್ತಿ ಶಿಖಾ ಟಂಡನ್ ಪ್ರಶಸ್ತಿಗೆ ಆಯ್ಕೆಯಾದ ಇತರರಾಗಿದ್ದಾರೆ.

ಜೀವಮಾನದ ಸಾಧನೆಗಾಗಿ ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ.ವರದರಾಜ್ ಅವರಿಗೆ ಹಾಗೂ ವಿಶೇಷ ಪ್ರಶಸ್ತಿಯನ್ನು ಭಾರತೀಯ ಕ್ರಿಕೆಟ್ ಪ್ರತಿಭೆ ಅನಿಲ್ ಕುಂಬ್ಳೆ ಅವರಿಗೆ ನೀಡಿ ಗೌರವಿಸಲಾತು.

ಪ್ರಶಸ್ತಿ ವಿಜೇತರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ತಮ್ಮ ಸಾಧನೆಂದಾಗಿ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ. ಅವರು ಕರ್ನಾಟಕದ ಹೆಮ್ಮೆಯ ಪ್ರತೀಕವಾಗಿದ್ದಾರೆ ಎಂದು ಎಸ್ಸೆಲ್ ಮತ್ತು ಜೀ ನೆಟ್‌ವರ್ಕನ ಕಾರ್ಪೊರೇಟ್ ಮತ್ತು ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷ ಗೌತಮ್ ಮಾಚಯ್ಯ ತಿಳಿಸಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಶ್ರೀನಿವಾಸ್ ರಾವ್ ಅವರ ನೇತೃತ್ವದಲ್ಲಿ ನೇಮಕವಾದ ಆಯ್ಕೆ ಸಮಿತಿಯಲ್ಲಿ ಯುವ ಮತ್ತು ಕ್ರೀಡಾ ಇಲಾಖೆಯ ಕಮಿಷನರ್ ಅಮರ್ ಕುಮಾರ್ ಪಾಂಡೆ, ಖ್ಯಾತ ಹಾಕಿ ಪಟು ಆಶಿಷ್ ಬಲ್ಲಾಳ್, ಖ್ಯಾತ ವ್ಹೀಲ್ ಚೇರ್ ಆಟಗಾರ್ತಿ ಮಾಲತಿ ಹೊಳ್ಳ, ಓಲಂಪಿಕ್ ಈಜುಗಾರ್ತಿ ನಿಶಾ ಮಿಲ್ಲೆಟ್, ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಆಡ್ವಾಣಿ, ಪ್ರಜಾವಾಣಿಯ ಕ್ರೀಡಾ ಸುದ್ದಿ ಸಹಸಂಪಾದಕ ಎಂ.ಎ.ಪೊನ್ನಪ್ಪ, ಅರ್ಜುನ್ ಪ್ರಶಸ್ತಿ ವಿಜೇತೆ ಅಥ್ಲಿಟ್ ರೀತ್ ಅಬ್ರಹಾಮ್, ಇಂಡಿಯನ್ ಎಕ್ಸ್‌ಪ್ರೆಸ್‌ನ ಕ್ರೀಡಾ ಸುದ್ದಿ ಸಂಪಾದಕ ಎಸ್.ಎಸ್.ಶ್ರೀಕುಮಾರ್, ಪತ್ರಕರ್ತ, ಬರಹಗಾರ ವೇದಮ್ ಜೈಶಂಕರ್ ಸದಸ್ಯರಾಗಿದ್ದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+