ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸೀಸ್ ವಿರುದ್ಧ ಭಾರತಕ್ಕೆ ಶೋಚನೀಯ ಸೋಲು

By Staff
|
Google Oneindia Kannada News

India slump hands Australia win ಅಡಿಲೇಡ್ , ಫೆ.17: ಕಾಮೆನ್ ವೆಲ್ತ್ ಬ್ಯಾಂಕ್ ಸರಣಿಯ ಏಳನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸಣ್ಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಭಾರತತಂಡ, ಅದರ ಲಾಭ ಪಡೆಯುವಲ್ಲಿ ವಿಫಲವಾಯಿತು. ಆಸೀಸ್ ತಂಡಕ್ಕೆ 50 ರನ್ ಗಳ ಸುಲಭ ಜಯ ದೊರಕಿತು.

204 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ 41.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೇಟ್ ಗಳನ್ನು ಕಳೆದುಕೊಂಡು 153 ರನ್ ಗಳಿಸಿ ಶೋಚನೀಯ ಸೋಲು ಅನುಭವಿಸಿತು. ಭಾರತದ ಪರ ಯುವರಾಜ್ (26), ಧೋನಿ(37) ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಆಸೀಸ್ ಪರ ಮಿಚೈಲ್ ಜಾನ್ಸಸ್ 42 ರನ್ ಗಳಿಗೆ 3 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡ ಇಶಾಂತ್ ಶರ್ಮ ಹಾಗೂ ಇರ್ಫಾನ್ ಪಠಾಣ್ ಅವರ ಕರಾರುವಾಕ್ ಬೌಲಿಂಗಿಗೆ ತತ್ತರಿಸಿದರು. 112 ರನ್ ಗಳಿಗೆ 6 ವಿಕೇಟ್ ಕಳೆದುಕೊಂಡಿದ್ದಾಗ ಮೈಕಲ್ ಕ್ಲಾರ್ಕ್ ಆಸರೆಯಾಗಿ ನಿಲ್ಲದ್ದಿದ್ದರೆ ಆಸೀಸ್ ತಂಡ 200ರ ಗಡಿ ದಾಟಲು ಸಾಧ್ಯವಾಗುತ್ತಿರಲಿಲ್ಲ. ಕ್ಲಾಕ್ 79 ರನ್ ಹಾಗೂ ಬ್ರಾಡ್ ಹಾಗ್ ಗಳಿಸಿದ 32 ರನ್ ಗಳ ನೆರವಿನಿಂದ ಆಸೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೇಟ್ ಗಳ ನಷ್ಟಕ್ಕೆ 203ರನ್ ಗಳಿಸಿತು. ಭಾರತದ ಪರ ಇರ್ಫಾನ್ ಪಠಾಣ್ 41 ರನ್ನಿತ್ತು 4 ವಿಕೇಟ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X