• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಶ್ರೇಷ್ಠ ಕ್ರೀಡಾಪಟು ಯಾರು?

By Staff
|

chess wizard girish koushikಬೆಂಗಳೂರು, ಫೆ.5: ಕ್ರಿಕೆಟ್‌ನ ದೈತ್ಯ ಪ್ರತಿಭೆ ಅನಿಲ್ ಕುಂಬ್ಳೆ 2008ರ ಎಸ್ಸೆಲ್ ಕರ್ನಾಟಕ ಶ್ರೇಷ್ಠ ಕ್ರೀಡಾಪಟುವಾಗಿ ವಿಶೇಷ ಪ್ರಶಸ್ತಿಗೆ ಹಾಗೂ ಜೀವಮಾನದ ಸಾಧನೆಗಾಗಿ ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಕೆ.ವಿ.ವರದರಾಜ್ ಆಯ್ಕೆಯಾಗಿದ್ದಾರೆ.

ಅನಿಲ್ ಕುಂಬ್ಳೆ ಮತ್ತು ವರದರಾಜ್ ಅವರನ್ನು ಹೊರತುಪಡಿಸಿ ಗಣ್ಯರನ್ನೊಳಗೊಂಡ ಆಯ್ಕೆ ಸಮಿತಿಯು ಐದು ಜನರನ್ನು ಆಯ್ಕೆ ಮಾಡಿದೆ. ಈ ಐವರಲ್ಲಿ ಒಬ್ಬರನ್ನು ಕರ್ನಾಟಕದ ಜನತೆ ಎಸ್ಸೆಮ್ಮೆಸ್ ಮತ್ತು ದೂರವಾಣಿ ಕರೆಯ ಮೂಲಕ ಕರ್ನಾಟಕ ಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಬಹುದು. ಆಯ್ಕೆಯಾದ ಐದು ಕ್ರೀಡಾ ಪಟುಗಳ ಎಸ್ಸೆಮ್ಮೆಸ್ ಮತ್ತು ಇತರೆ ವಿವರಗಳು ಈ ಕೆಳಗಿನಂತಿದೆ. ಫೆ.13ರ ಒಳಗಾಗಿ ಕರ್ನಾಟಕದ ಜನತೆ ತಮ್ಮ ನೆಚ್ಚಿನ ಕ್ರೀಡಾ ಪಟು ಆಯ್ಕೆಗೆ ಎಸ್ಸೆಮ್ಮೆಸ್ ಕಳುಹಿಸಬಹುದು. ಆಯ್ಕೆಯಾದ ಕ್ರೀಡಾಪಟುಗಳಿಗೆ ಫೆ.16ರಂದು ಪ್ರಶಸ್ತಿ ವಿತರಿಸಲಾಗುವುದು ಎಂದು ಎಸ್ಸೆಲ್ ಸಂಸ್ಥೆ ಯ ಪ್ರಕಟಣೆ ತಿಳಿಸಿದೆ.

ಅನುಪ್ ಶ್ರೀಧರ್, ಟ್ರಾಯ್ ಬ್ಯಾಡ್‌ಮಿಂಟನ್ ಚಾಂಪಿಯನ್ ಅವರನ್ನು ಆಯ್ಕೆ ಮಾಡಲು ANUP ಎಂದು ಟೈಪ್ ಮಾಡಿ 57575ಗೆ ಎಸ್ಸೆಮ್ಮೆಸ್ ಕಳುಹಿಸಿ ಅಥವಾ ನಿಮ್ಮ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ 186-2424-7575-40 ಸಂಖ್ಯೆಗೆ ಕರೆ ಮಾಡಿ- .

ಚಿತ್ರಾ ಮಗೈಮರಜ್, ವಿಶ್ವ ಮಹಿಳಾ ಬಿಲಿಯರ್ಡ್ಸ್ ಚಾಂಪಿಯನ್ ಅವರನ್ನು ಆಯ್ಕೆ ಮಾಡಲು CHITRA ಎಂದು ಟೈಪ್ ಮಾಡಿ 57575ಗೆ ಎಸ್ಸೆಮ್ಮೆಸ್ ಕಳುಹಿಸಿ ಅಥವಾ ನಿಮ್ಮ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ 186-2424-7575-41 ಸಂಖ್ಯೆಗೆ ಕರೆ ಮಾಡಿ .

ಗಿರಿಶ್ ಎ. ಕೌಶಿಕ್, ವಿಶ್ವ ಯುವ ಚೆಸ್ ಚಾಂಪಿಯನ್ ಅವರನ್ನು ಆಯ್ಕೆ ಮಾಡಲು GIRISH ಎಂದು ಟೈಪ್ ಮಾಡಿ 57575ಗೆ ಎಸ್ಸೆಮ್ಮೆಸ್ ಕಳುಹಿಸಿ ಅಥವಾ ನಿಮ್ಮ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ 186-2424-7575-42 ಸಂಖ್ಯೆಗೆ ಕರೆ ಮಾಡಿ.-

ಹೆಲೆನ್ ಮೇರಿ ಇನ್ನೊಸೆಂಟ್, ಭಾರತೀಯ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ, ಇವರನ್ನು ಆಯ್ಕೆ ಮಾಡಲು HELEN ಎಂದು ಟೈಪ್ ಮಾಡಿ 57575ಗೆ ಎಸ್ಸೆಮ್ಮೆಸ್ ಕಳುಹಿಸಿ ಅಥವಾ ನಿಮ್ಮ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ 1186-2424-7575-43 ಸಂಖ್ಯೆಗೆ ಕರೆ ಮಾಡಿ.

ಶಿಖಾ ಟಂಡನ್, ಒಲಂಪಿಕ್ ಈಜುಗಾರ್ತಿ, ಇವರನ್ನು ಆಯ್ಕೆ ಮಾಡಲು SHIKHA ಎಂದು ಟೈಪ್ ಮಾಡಿ ಎಂದು ಟೈಪ್ ಮಾಡಿ 57575ಗೆ ಎಸ್ಸೆಮ್ಮೆಸ್ ಕಳುಹಿಸಿ ಅಥವಾ ನಿಮ್ಮ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಯಿಂದ 186-2424-7575-44 ಸಂಖ್ಯೆಗೆ ಕರೆ ಮಾಡಿ.

ಪ್ರಶಸ್ತಿ ವಿಜೇತರು ಕರ್ನಾಟಕದ ಹೆಸರನ್ನು ತಮ್ಮ ಸಾಧನೆಯಿಂದಾಗಿ ವಿಶ್ವಮಟ್ಟಕ್ಕೇರಿಸಿದ್ದಾರೆ. ಅವರು ವಿಶ್ವದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವಂತವರಾಗಿದ್ದಾರೆ ಎಂದು ಎಸ್ಸೆಲ್ ಮತ್ತು ಜೀ ನೆಟ್‌ವರ್ಕ್‌ನ ಕಾರ್ಪೊರೇಟ್ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ಉಪಾಧ್ಯಕ್ಷ ಗೌತಮ ಮಾಚಯ್ಯ ಹೇಳಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಶ್ರೀನಿವಾಸ್ ರಾವ್ ಅವರ ನೇತೃತ್ವದಲ್ಲಿ ನೇಮಕವಾದ ಆಯ್ಕೆ ಸಮಿತಿಯಲ್ಲಿ ಯುವ ಮತ್ತು ಕ್ರೀಡಾ ಇಲಾಖೆಯ ಕಮಿಷನರ್ ಅಮರ್ ಕುಮಾರ್ ಪಾಂಡೆ, ಖ್ಯಾತ ಹಾಕಿ ಪಟು ಆಶಿಷ್ ಬಲ್ಲಾಳ್, ಖ್ಯಾತ ವ್ಹೀಲ್ ಚೇರ್ ಆಟಗಾರ್ತಿ ಮಾಲತಿ ಹೊಳ್ಳ, ಓಲಂಪಿಕ್ ಈಜುಗಾರ್ತಿ ನಿಶಾ ಮಿಲ್ಲೆಟ್, ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ, ಪ್ರಜಾವಾಣಿಯ ಕ್ರೀಡಾ ಸುದ್ದಿ ಸಹಸಂಪಾದಕ ಎಂ.ಎ.ಪೊನ್ನಪ್ಪ, ಅರ್ಜುನ್ ಪ್ರಶಸ್ತಿ ವಿಜೇತೆ ಅಥ್ಲಿಟ್ ರೀತ್ ಅಬ್ರಹಾಮ್, ಇಂಡಿಯನ್ ಎಕ್ಸ್‌ಪ್ರೆಸ್‌ನ ಕ್ರೀಡಾ ಸುದ್ದಿ ಸಂಪಾದಕ ಎಸ್.ಎಸ್.ಶ್ರೀಕುಮಾರ್, ಪತ್ರಕರ್ತ, ಬರಹಗಾರ ವೇದಮ್ ಜೈಶಂಕರ್ ಸದಸ್ಯರಾಗಿದ್ದರು.

(ದಟ್ಸ್‌ಕನ್ನಡ ಕ್ರೀಡಾವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more