ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕರ್ನಾಟಕದಲ್ಲಿ ಗೋ ಪರಿವಾರಕ್ಕೆ ಚಾಲನೆ

By Staff
|
Google Oneindia Kannada News

ಅಂದು ಶಿವದೀಕ್ಷೆ ಇಂದು ಗೋ ದೀಕ್ಷೆ: ಶಿವಾಚಾರ್ಯ ಸ್ವಾಮಿಜಿ, ಕಾಶಿಜೇವರ್ಗಿ: ತಾಂಡವ ವೇದಿಕೆಯಲ್ಲಿ ಗೋ ಸಂರಕ್ಷಣೆಗಾಗಿ ,ರಾಜ್ಯಾದ್ಯಂತ ಗೋ ಪರಿವಾರ ಸಂಯೋಜನೆ ಚಾಲನೆಗೊಂಡಿದೆ. ಗೋಶಾಲೆಗಳ ಸ್ಥಾಪನೆ,ಗೋ ಆಧಾರಿತ ಕೃಷಿಗೆ ಉತ್ತೇಜನ ,ಗವ್ಯ ಉತ್ಪನ್ನಗಳ ತಯಾರಿಕಾ ತರಬೇತಿ, ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸುವುದು ,ದುಡಿದು ಮುದಿಯಾದ ದನಗಳ ನಿವೃತ್ತ ಜೀವನಕ್ಕೆ ಮಾರ್ಗ ಮೊದಲಾದ ಹಲವು ಕಾರ್ಯಕ್ರಮಗಳನ್ನು ಈ ಯೋಜನೆ ಹೊಂದಿದೆ.

ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗೋ ಪರಿವಾರ ರೂಪುಗೊಳ್ಳುತ್ತಿದ್ದು ಪ್ರಥಮ ಹಂತವಾಗಿ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಗೋ ಪರಿವಾರ ಸಂಯೋಜನೆಗೊಂಡು ಜಿಲ್ಲಾಮಟ್ಟದ ಗೋ ಪರಿವಾರದ ಸದಸ್ಯರು ,ಗಂವ್ಹಾರದ ಶಿವಸತ್ರದ ಮಹಾನಂದಿ ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದರು.

ಇದು ಗೋ ಸಂವರ್ಧನೆ,ಸಂರಕ್ಷಣೆ, ಸಂಶೋಧನೆ, ಸಂಭೋದನೆಯ ಮಹೋನ್ನತ ಕಾರ್ಯನಿರ್ವಹಿಸುತ್ತಿರುವ ಶ್ರೀ ರಾಮಚಂದ್ರಾಪುರಮಠದ ಕಾಮಧುಘಾ ಯೋಜನೆಯ ಅಂಗವಾಗಿದೆ. ಭಾರತೀಯ ಗೋ ಯಾತ್ರೆ ,ವಿಶ್ವ ಗೋ ಸಮ್ಮೇಳನ , ಗೋ ಸಂಸತ್ ,ಕೋಟಿ ನೀರಾಜನದಂತಹ ಕಾರ್ಯಕ್ರಮ ನಡೆಸಿ ,ಅಳವಿನಂಚಿನಲ್ಲಿರುವ ಗೋತಳಿ ಉಳಿಸುವ ಜಾಗೃತಿ ಮೂಡಿಸಿದೆ.

ಗೋ ಬ್ಯಾಂಕು ,ಗೋ ಸಂಜೀವಿನಿಯನ್ನು ರೂಪಿಸಿ ದನಗಳನ್ನು ಮಾರುವ ಪ್ರವೃತ್ತಿಯನ್ನು ತಪ್ಪಿಸಲು ಯತ್ನಿಸುತ್ತಿದೆ. ಗೋಮಯ ಹಾಗೂ ಗೋ ಮೂತ್ರಗಳ ಡೈರಿಯನ್ನು ಸ್ಥಾಪಿಸಿ ,ಗೋವಿನ ಜೀವಿತಾವಧಿಯ ಪೂರ್ಣಲಾಭ ರೈತನಿಗೆ ತಲುಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ವರದಿ: ಕಲಗಾರು ಎಲ್ ಹೆಗಡೆ

*****
ಅಂದು ಶಿವದೀಕ್ಷೆ ಇಂದು ಗೋ ದೀಕ್ಷೆ: ಶಿವಾಚಾರ್ಯ ಸ್ವಾಮಿಜಿ, ಕಾಶಿ
-
ಸುಕ್ಷೇತ್ರ ಗಂವ್ಹಾರದಲ್ಲಿ ನಡೆಯುತ್ತಿರುವ ಶಿವಸತ್ರವು ಒಂದು ಅಪೂರ್ವ ಕಾರ್ಯಕ್ರಮ ಇದರಿಂದ ಶಿವಭಕ್ತರಿಗೆ ಅತ್ಯಂತ ಸಂತೋಷವಾಗಿದೆ. ನಾಡಿನ ಎಲ್ಲಾ ಸಂಪ್ರದಾಯಗಳನ್ನು ಒಂದೇ ವೇದಿಕೆಯಲ್ಲಿ ಬರಮಾಡಿಕೊಂಡು ನಾವೆಲ್ಲಾ ಒಂದೇ ಎಂಬ ಭಾವನೆ ಮೂಡಿದೆ ಎಂದು ಶ್ರೀ ಜಗದ್ಗುರು ಚಂದ್ರಶೇಖರ ಶಿವಚಾರ್ಯ ಭಗವತ್ಪಾದಂಗಳವರು ಹೇಳಿದರು.

ಗೋ ರಕ್ಷಣೆ ಎಲ್ಲರಿಗೂ ಪರಿಚಯವಾಗಿರುವಂತಹದ್ದು. ಈ ದೇಶದಲ್ಲಿ ಗೋ ರಕ್ಷಣೆಗಾಗಿ ಬಹಳಷ್ಟು ಕೂಗುಗಳು ಕೇಳಿಬರುತ್ತಿವೆ ಆದರೆ ರಾಘವೇಶ್ವರರು ಗೋ ರಕ್ಷಣೆಯನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಶಿವ ಸತ್ರದ ಮುಖಾಂತರ ಗೋ ರಕ್ಷಣೆಯ ಸಂದೇಶ ಸಾರುತ್ತಿದ್ದಾರೆ ಎಂದು ಶಿವಾಚಾರ್ಯರು ತಿಳಿಸಿದರು.

ಹಿಂದೂ ದೇಶದಲ್ಲಿ ಅನೇಕ ದೇವರನ್ನು ಪೂಜಿಸುತ್ತಾ ಬಂದಿರುವುದು ಕಾಣಿಸುತ್ತದೆ. ಆದರೆ ವಾಸ್ತವವೆಂದರೆ ನಾವು ಹಲವು ನಾಮಗಳಿಂದ ಒಬ್ಬ ದೇವರನ್ನು ತಲುಪಲು ಪೂಜಿಸುತ್ತಿದ್ದೇವೆ. ಎಲ್ಲಾ ನದಿಗಳು ಅಂತಿಮವಾಗಿ ಸಮುದ್ರ ಸೇರುವಂತೆ, ಹಲವು ನಾಮಗಳಿಂದ ಪೂಜಿಸುವುದು ಪರಮತತ್ವನಾದ ಶಿವನಿಗೆ ಸಲ್ಲುತ್ತದೆ. ಪರಮತತ್ವನಾದ ಶಿವನನ್ನು ಬ್ರಹ್ಮ, ಬುದ್ಧ, ಜಿನ , ಹೀಗೆ ಹಲವು ನಾಮಗಳಿಂದ ಕರೆದಿದ್ದಾರೆ.

ಕವಿ ಕಾಳಿದಾಸ ಹೇಳುವಂತೆ ಜಗತ್ತಿನ ಮಾತಾಪಿತೃರು ಶಿವ ಮತ್ತು ಪಾರ್ವತಿ. ಈ ಒಂದು ಶ್ಲೋಕದ ತಾತ್ಪರ್ಯ ನಾವೆಲ್ಲಾ ಶಿವನ ಮಕ್ಕಳು ಎನ್ನುವುದನ್ನು ಸಾರುತ್ತದೆ. ಇವತ್ತಿನ ವಿಜ್ಞಾನ ಪ್ರಪಂಚ ಇಡೀ ವಿಶ್ವವನ್ನೇ ಒಂದು ಕುಗ್ರಾಮವನ್ನಾಗಿಸಿದೆ. ಶಿವ ಸತ್ರವು ವಿಶ್ವದ ಪಾತ್ರವಾಗಿದೆ. ವ್ಯಕ್ತಿ ವ್ಯಕ್ತಿಗಳಲ್ಲಿಯೂ ಕೂಡ ಶಿವ ದೃಷ್ಟಿ ಶಿವಸತ್ರದ ಮೂಲಕ ಸಿಗುವಂತಾಗಬೇಕು. ಸರ್ವರನ್ನು ಅಪ್ಪಿಕೊಳ್ಳುವಂತಹ, ಒಪ್ಪಿಕೊಳ್ಳುವಂತಹ ಕಾರ್ಯಕ್ರಮ ಶಿವಸತ್ರದಲ್ಲಿ ಚಾಲನೆ ದೊರಕಿದೆ. ಈ ಶಕ್ತಿಯನ್ನು ನಮ್ಮದೇಶದ ಗೋಸಂಪತ್ತನ್ನು ಉಳಿಸಿ ಬೆಳಸಲು ಬಳಸಿಕೊಳ್ಳಬೇಕು.

ಗೋ ಮಾಂಸದ ಬಳಕೆಗಾಗಿ ಇರುವಂತಹದ್ದಲ್ಲ. ಯಾವ ಪ್ರಾಣಿಗಳು ನಾಲಿಗೆ ಮುಖಾಂತರ ನೀರು ಕುಡಿಯುವ ಪ್ರಾಣಿಗಳೋ ಅವು ಮಾಂಸಾಹಾರಿಗಳು. ತುಟಿಯಿಂದ ನೀರು ಕುಡಿಯುವ ಪ್ರಾಣಿಗಳು ಸಸ್ಯಹಾರಿಗಳು. ಮನುಷ್ಯ ತನ್ನ ನಾಲಿಗೆಯ ರುಚಿಗೆ ಅಡಿಯಾಳಾಗಿ ಮಾಂಸಾಹಾರಿಯಾಗಿ ಬದಲಾಗಿದ್ದಾನೆ. ಶಾಕಾಹಾರಿಗಳು ಹೆಚ್ಚಿನ ರೋಗಕ್ಕೆ ತುತ್ತಾಗುವುದಿಲ್ಲ. ಮಾಂಸಾಹಾರಿಗಳು ಹೆಚ್ಚಿನ ರೋಗಕ್ಕೆ ತುತ್ತಾಗುತ್ತಾರೆ. ಆದ್ದರಿಂದ ಆರೋಗ್ಯ ಬಯಸುವವರೆಲ್ಲರೂ ಪ್ರಾಣಿ ಹತ್ಯೆಯಿಂದ ದೂರವಿರಬೇಕು. ಗೋ ಮೂತ್ರವನ್ನು ಸೇವನೆ ಮಾಡಿ ಅನೇಕ ಖಾಯಿಲೆಯನ್ನು ಗುಣಮಾಡಿಕೊಳ್ಳಬಹುದು. ನಮಗೆ ಆರೋಗ್ಯ ನೀಡುವ ಗೋವನ್ನು ಉಳಿಸಿ ಬೆಳಸಲು ಎಲ್ಲರೂ ಗೋ ದೀಕ್ಷೆ ತೆಗೆದುಕೊಳ್ಳಬೇಕು.

ಹಿಂದೆ ಶಿವ ಪೂಜೆಗೆ ದೀಕ್ಷೆ ಪಡೆದುಕೊಳ್ಳಬೇಕಾಗಿತ್ತು ಆದರೆ ಇಂದು ಗೋ ಉಳಿಸಲು ದೀಕ್ಷೆ ತೆಗೆದುಕೊಳ್ಳಬೇಕಾಗಿದೆ. ಅದು ಶ್ರೀ ರಾಘವೇಶ್ವರರ ನೇತೃತ್ವದಲ್ಲಿ ನಡೆಯುತ್ತಿದೆ ಅದಕ್ಕೆ ಶಿವಭಕ್ತರು ಚಳವಳಿಯೋಪಾದಿಯಲ್ಲಿ ತೊಡಗಬೇಕು. ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಕೃಷಿಕರಲ್ಲಿ ಸಾವಯವ ಪದ್ದತಿ ಮರಳಿ ಚಳುವಳಿಯಾದಾಗ ಗೋ ಸಂಪತ್ತು ತನ್ನಿಂದತಾನೆ ವೃದ್ಧಿಯಾಗುತ್ತದೆ. ಆದ್ದರಿಂದ ಮಹಾಜನತೆ ಶ್ರೀ ರಾಘವೇಶ್ವರರ ಜತೆ ಕೈ ಜೋಡಿಸ ಬೇಕು ಎಂದರು.

ವೇದಿಕೆಯಲ್ಲಿ ಶ್ರೀ ಸೋಪಾನ ನಾಥ ಶ್ರೀಗಳು, ಶ್ರೀ ರಾಘವೇಶ್ವರ ಸ್ವಾಮೀಜಿ, ಶ್ರೀ ಗಂಗಾಧರ ಮಹಾಸ್ವಾಮಿಗಳು ಅಬ್ಬೆ ತುಮಕೂರು, ಅಂದೋಲ ಶ್ರೀಗಳು ಸೇರಿದಂತೆ ಹಲವಾರು ಸಂತರು ಉಪಸ್ಥಿತರಿದ್ದರು. ಸಭೆಗೆ ಸುಬ್ರಹ್ಮಣ್ಯ ಅರಲಗೂಡು ಪ್ರಾರ್ಥಿಸಿ, ಸ್ವಾಗತಿಸಿ ವಂದಿಸಿದರು.

ವರದಿ: ಆರ್.ಶರ್ಮಾ,ತಲವಾಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X