ನಾರಾಯಣ ಮೂರ್ತಿ ರಾಷ್ಟ್ರಗೀತೆ ಅವಮಾನಿಸಿಲ್ಲ : ಕೋರ್ಟ್

Narayana Murthyನವದೆಹಲಿ, ಫೆ.04 : ರಾಷ್ಟ್ರಗೀತೆಗೆ ಅವಮಾನ ಎಸಗಿದ್ದಾರೆಂಬ ಆರೋಪದಿಂದ ಇನ್ಫೋಸಿಸ್ ಸ್ಥಾಪಕ ಪದ್ಮವಿಭೂಷಣ ಪ್ರಶಸ್ತಿ ವಿಜೇತ ನಾರಾಯಣ ಮೂರ್ತಿ ಮುಕ್ತರಾಗಿದ್ದಾರೆ.

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮತ್ತು ಕೆಲ ವಿದೇಶಿ ಗಣ್ಯರಿದ್ದ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ವಿದೇಶಿಯರಿಗೆ ಮುಜುಗರವಾಗುತ್ತದೆಂಬ ಕಾರಣಕ್ಕೆ ರಾಷ್ಟ್ರಗೀತೆ ಹಾಡುವುದನ್ನು ನಾರಾಯಣ ಮೂರ್ತಿ ರದ್ದು ಮಾಡಿದ್ದರು.

ರಾಷ್ಟ್ರಗೀತೆ ಹಾಡುವುದನ್ನು ರದ್ದುಪಡಿಸಿ ಅದಕ್ಕೆ ಅವಮಾನ ಎಸಗಿದ್ದಾರೆಂದು ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ಮೂರ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ತನ್ನ ಅರ್ಜಿಯಲ್ಲಿ ಕೇಳಿಕೊಂಡಿತ್ತು. ಪ್ರಿವೆನ್ಷನ್ ಆಫ್ ಇನ್‌ಸಲ್ಟ್ ಟು ನ್ಯಾಷನಲ್ ಆನರ್ ಕಾಯ್ದೆಯ ಮೂರನೇ ಸೆಕ್ಷನ್ ಅಡಿ ರಾಷ್ಟ್ರಗೀತೆಗೆ ಮೂರ್ತಿ ಅವಮಾನ ಮಾಡಿದ್ದಾರೆಂದು ಹೇಳಿತ್ತು.

ಆದರೆ, ಪತ್ರಿಕೆಗಳಲ್ಲಿ ಈ ಕುರಿತಾಗಿ ಹುಯಿಲೆದ್ದನಂತರ ನಾರಾಯಣ ಮೂರ್ತಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಮೈಸೂರಿನ ಮುಖ್ಯ ದಂಡಾಧಿಕಾರಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾ ಮಾಡಿ ಆದೇಶ ಹೊರಡಿಸಿತ್ತು.

ಈಗ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಭಾಸ್ಕರನ್, ನ್ಯಾಯಮೂರ್ತಿ ಸಿ.ಕೆ.ಠಾಕೂರ್ ಮತ್ತು ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿಹಾಕಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+