ಪೆಟ್ರೋಲ್ ಬೆಲೆ ಏರಿಕೆಯಾದರೆ ಸರ್ಕಾರಕ್ಕೆ ಕುತ್ತು
ನವದೆಹಲಿ, ಫೆ.4: ತೈಲ ಬೆಲೆ ಏರಿಕೆ ಕುರಿತು ನಿರ್ಧರಿಸಲು ಸೋಮವಾರ ಸಭೆ ಸೇರಬೇಕಾಗಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸಚಿವ ಸಂಪುಟ ಸಭೆ ಮುಂದೂಡಲ್ಪಟ್ಟಿದೆ. ಇಂದು ಕೇಂದ್ರ ಸಚಿವ ಸಂಪುಟ ಸಭೆ ಸೇರಿ ಪೆಟ್ರೋಲ್,ಡೀಸೆಲ್ ಬೆಲೆ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು.
ಇಂದು ಮಧ್ಯಾಹ್ನ ಸಚಿವ ಸಂಪುಟ ಸಭೆ ಸೇರಿ ಪೆಟ್ರೋಲ್ ಬೆಲೆಯನ್ನು 2.ರೂ. ಹಾಗೂ ಡೀಸೆಲ್ ಬೆಲೆಯನ್ನು 1ರೂ.ಗಳಿಗೆ ಏರಿಸುವ ಹಾಗೂ ಈ ಎರಡೂ ಇಂಧನಗಳ ಮೇಲಿನ ಸೀಮಾ ಸುಂಕವನ್ನು ಇಳಿಸುವ ನಿರ್ಧಾರ ಕೈಗೊಳ್ಳಬೇಕಾಗಿತ್ತು. ಶೀಘ್ರದಲ್ಲೇ ಮತ್ತೆ ಸಭೆ ಸೇರುವುದಾಗಿ ಉನ್ನತ ಮೂಲಗಳು ತಿಳಿಸಿದ್ದಾರೆ.
ತೈಲ ಬೆಲೆ ಏರಿಕೆ ಕುರಿತು ಕೇಂದ್ರ ಸಚಿವರಲ್ಲೇ ಭಿನ್ನಾಭಿಪ್ರಾಯವಿದೆ. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೊರಾ ತೈಲ ಬೆಲೆಯ ಕನಿಷ್ಠ ಏರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ತೈಲ ಬೆಲೆ ಏರಿಕೆಗಿಂತಲೂ ಸೀಮಾ ಸುಂಕವನ್ನು ಹೆಚ್ಚಿಸಬೇಕೆಂಬ ವಾದಅವರದು. ಹಾಗಾಗಿ ಇಂದಿನ ಸಭೆ ಮಹತ್ವ ಪಡೆದುಕೊಂಡಿತ್ತು.
(ಏಜೆನ್ಸೀಸ್)












Click it and Unblock the Notifications