ಬೆಟ್ಟಿಂಗ್ ಜಾಲ ಬೇಧಿಸಿದ ಸಿಸಿಬಿ ಪೊಲೀಸರು

ಬೆಂಗಳೂರು, ಫೆ.3: ನಗರದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು ಸುಮಾರು 35 ಲಕ್ಷ ರು ಮೊತ್ತದ ಕ್ರೆಡಿಟ್ ಸ್ಲಿಪ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಆಸೀಸ್ , ಭಾರತ ಹಾಗೂ ಶ್ರೀಲಂಕಾ ನಡುವಿನ ತ್ರಿಕೋಣ ಸರಣಿಯ ಬಿಸಿ ನಗರಕ್ಕೂ ತಟ್ಟಿದೆ.

ಗಾಂಧಿನಗರದ 4 ನೇ ಅಡ್ಡರಸ್ತೆಯಲ್ಲಿನ ಅಪಾರ್ಟ್ ಮೆಂಟ್ ವೊಂದರ ಅಡ್ಡಕ್ಕೆ ನುಗ್ಗಿದ ಸಿಸಿಬಿ ಪೊಲೀಸ್ ತಂಡ ಬೆಟ್ಟಿಂಗ್ ನಡೆಸುತ್ತಿದ್ದ 3 ದುಷ್ಕರ್ಮಿಗಳನ್ನು ಸೆರೆ ಹಿಡಿದಿದ್ದಾರೆ. ಕಂಪ್ಯೂಟರ್ , ಆರು ಮೊಬೈಲ್ ಫೋನ್, ಎರಡು ಸ್ಥಿರ ದೂರವಾಣಿ, ಎರಡು ಟಿವಿ, 11,805 ರು ನಗದು ಮತ್ತು 35 ಲಕ್ಷ ರು ಮೌಲ್ಯದ ಕ್ರೆಡಿಟ್ ಸ್ಲಿಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟೆಲಿಫೋನ್ ಇಂಟರ್ ನೆಟ್ ಮೂಲಕ ಬೆಟ್ಟಿಂಗ್ ಜಾಲವನ್ನು ದೇಶದಾದ್ಯಂತ ಹಬ್ಬಿಸುತ್ತಿದ್ದರು. ಆರೋಪಿಗಳನ್ನು ತನಿಖೆಗೆ ಒಳಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಅತ್ತ ಬ್ರಿಸ್ಬೇನ್ ನಲ್ಲಿ ಭಾರತ ತಂಡ ಮತ್ತೆ ಬ್ಯಾಟಿಂಗ್ ವೈಫಲ್ಯ ಕಂಡು 194ರನ್ ಗಳಿಗೆ ಆಲೌಟ್ ಆಯಿತು.ಈ ಮೊತ್ತವನ್ನು ವಿಶ್ವಾಸದಿಂದ ಬೆನ್ನಟ್ಟಿದ್ದ ಕಾಂಗೂರುಗಳಿಗೆ ಮಳೆರಾಯನ ಅಡ್ಡಿಯಿಂದ ನಿರಾಶೆಯಾಯಿತು. ಪಂದ್ಯವನ್ನು ಮಳೆಯ ಕಾರಣ ರದ್ದು ಮಾಡಿದಾಗ ಆಸೀಸ್ ತಂಡ 51 ರನ್ ಗಳಿಸಿ 3 ವಿಕೇಟ್ ಗಳಿಸಿತ್ತು. ಮಳೆ ನಿಲ್ಲದ ಕಾರಣ ಎರಡು ತಂಡಗಳಿಗೆ 2 ಅಂಕಗಳನ್ನು ಹಂಚಲಾಯಿತು.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+