ಇಂದಿರಾನಗರ:ಖಾಸಗಿ ಬಸ್ ವೇಗಕ್ಕೆ ಮಹಿಳೆ ಬಲಿ

ಬೆಂಗಳೂರು: ಇಂದಿರಾನಗರದಲ್ಲಿ ಬೈಕ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇಮೃತಪಟ್ಟಿದ್ದಾರೆ. ಇಂದು (ಜ.25)ಬೆಳಗ್ಗೆ ನಡೆದ ಈ ಅಪಘಾತದಿಂದ ರೊಚ್ಚಿಗೆದ್ದ ಸಾರ್ವಜನಿಕರು ಬಸ್ ಗೆ ಬೆಂಕಿ ಹಚ್ಚಿ ಗಲಾಟೆ ನಡೆಸಿದ್ದಾರೆ.

ಬೈಕ್ ನಲ್ಲಿ ಸಾಗುತ್ತಿದ್ದ ಮಹಿಳೆಗೆ ಎದುರಾದ ಖಾಸಗಿ ಬಸ್ ಅತಿಯಾದ ವೇಗದಿಂದ ಬಂದು ಅಪ್ಪಳಿಸಿತು ಎಂದು ಪ್ರತ್ಯ ಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ. ಮೃತಪಟ್ಟ ಮಹಿಳೆಯ ಬಗ್ಗೆ ವಿವರಗಳು ಲಭ್ಯವಾಗಿಲ್ಲ. ಈ ಘಟನೆಯಿಂದ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಪೊಲೀಸರು ಸಾರ್ವಜನಿಕರನ್ನು ತಹಬಂದಿಗೆ ತರಲು ಯತ್ನಿಸುತ್ತಿದ್ದಾರೆ.


ಎಂಪಿ ಪ್ರಕಾಶ್ ಸಂಬಂಧಿ ಸಂಶಯಾಸ್ಪದ ಸಾವು

ಬೆಂಗಳೂರು: ಮಾಜಿ ಗೃಹಸಚಿವ ಎಂ.ಪಿ.ಪ್ರಕಾಶ್ ಅವರಸೋದರ್ ಸಂಬಂಧಿ ಡಾ. ಚಂದ್ರಶೇಖರ್ ನಗರದಲ್ಲಿ ಗುರುವಾರ(ಜ.24) ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ. ಗಾಂಧಿನಗರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಇವರು,ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಕ್ವೀನ್ಸ್ ಕಾರ್ನರ್ ಅಪಾರ್ಟ್ ಮೆಂಟ್ ನಲ್ಲಿ ಒಬ್ಬರೇ ವಾಸಿಸುತ್ತಿದ್ದರು.

ಗುರುವಾರ ಯಾರ ಕರೆಯನ್ನು ಸ್ವೀಕರಿಸದ ಕಾರಣ, ಸ್ನೇಹಿತರೊಬ್ಬರು ಸಂಜೆ ಮನೆಗೆ ಹೋಗಿ ನೋಡಿದಾಗ, ಚಂದ್ರಶೇಖರ್ ಅವರು ಸಾವನ್ನಪ್ಪಿರುವುದು ಪತ್ತೆಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಗಿದ್ದು, ಸಾವಿನ ಕಾರಣ ತಿಳಿದುಬಂದಿಲ್ಲ. ಮೃತರ ಪತ್ನಿ ವಿದೇಶದಲ್ಲಿ ನೆಲೆಸಿದ್ದಾರೆ.
(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+