ಜೇನುಗೂಡು ನಾವೆಲ್ಲಾ ಬೇರೆ ಆಗೋಮಾತಿಲ್ಲ
ಬೆಂಗಳೂರು, ಜ.23: ಸಹಕಾರ, ಸಹಬಾಳ್ವೆಗೆ ಹೆಸರಾದ ಜೇನು ಹುಳುಗಳು ರಾಜ್ಯದ ರಾಮಗೋವಿಂದಪುರದ ಮರವನ್ನು ಲೋಕಪ್ರಸಿದ್ಧಿಗೆ ತಂದಿವೆ. ಇಲ್ಲಿನ ಆಲದ ಮರದಲ್ಲಿ ಸುಮಾರು 600 ಕ್ಕೂ ಅಧಿಕ ಜೇನುಗೂಡುಗಳು ಮನೆ ಮಾಡಿವೆ.ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಅಧಿಕ ಸಂಖ್ಯೆಯಲ್ಲಿ ಗೂಡು ಕಟ್ಟುತ್ತವೆ.
ಮಾರ್ಚ್ ವೇಳೆಗೆ ಜೇನುಗಳು ಇಲ್ಲಿಂದ ಮರೆಯಾಗುತ್ತವೆ. ಆಗ, ಮರದಿಂದ ಒಂದೊಂದೇ ಗೂಡುಗಳು ಕಮ್ಮಿಯಾಗುತ್ತ ಬರುತ್ತದೆ. ಜೇನುಹುಳಗಳಿಂದ ರೈತರಿಗೆ ಅನುಕೂಲವಗಿದ್ದು, ವರ್ಷಕ್ಕೆ ಐದು ಬಾರಿ ಬೆಳೆ ತೆಗೆಯುತ್ತೇವೆ ಎಂದು ಊರಿನ ಹಿರಿಯರು ಹೇಳುತ್ತಾರೆ.












Click it and Unblock the Notifications