ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ,ಕಾಮೆಡ್ ಕೆ ವಿದ್ಯಾರ್ಥಿಗಳಿಗೆ ರನ್ ವೇ..

By Staff
|
Google Oneindia Kannada News


ಬೆಂಗಳೂರು, ಜನವರಿ 23,: ಐಐಟಿ-ಜೆಇಇ, ಎಐಇಇಇ, ಮತ್ತು ಕರ್ನಾಟಕದಲ್ಲಿ ನಡೆಯುವ ಸಿಇಟಿ ಹಾಗೂ ಕಾಮೆಡ್ ಕೆ ಪರೀಕ್ಷೆಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಸುಲಭ ಮಾಹಿತಿ ಒದಗಿಸುವ ಸಕ್ಸಸ್ ರನ್‌ವೇ ಎಂಬ ಇ-ಶಿಕ್ಷಣ ಜಾಲ ಇಂದಿನಿಂದ ಪ್ರಾರಂಭವಾಗಲಿದೆ. ಬೇಸ್ ಎಂಬ ಪ್ರಾಥಮಿಕ ತರಬೇತಿ ಸಂಸ್ಥೆಯು ಎಕ್ಸೆಲ್ ಸಾಫ್ಟ್ ಎಂಬ ಸಂಪೂರ್ಣ ಇ-ಕಲಿಕೆಯ ಪರಿಹಾರವನ್ನು ಒದಗಿಸುವ ಸಂಸ್ಥೆಯೊಂದರ ಜೊತೆಸೇರಿ ಸಕ್ಸಸ್ ರನ್‌ವೇಯನ್ನು ವಿದ್ಯಾರ್ಥಿಗಳಿಗಾಗಿ ಪ್ರಾರಂಭಿಸಿದೆ.

http://www.successrunway.com ಜಾಲತಾಣವು ವಿದ್ಯಾರ್ಥಿಗಳಿಗೆ ಐಐಟಿ, ಎನ್‌ಐಟಿ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೆ ಸೇರಲಿಚ್ಚಿಸುವವರಿಗೆ ಉತ್ತೇಜನವನ್ನು ನೀಡುತ್ತದೆ. ಈ ತಾಣವು ಪರೀಕ್ಷೆ ಮತ್ತು ಮೌಲ್ಯಮಾಪನಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ತಯಾರಿ ನಡೆಸಲು ಪ್ರೇರಣೆ ನೀಡಲಿದೆ.

ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ. ಈ ಕುರಿತಾಗಿ ಇಂದು ಉದ್ಟಾಟಿಸಲ್ಪಟ್ಟ ಸಕ್ಸಸ್ ರನ್‌ವೇ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಮುಂದುವರಿಯಲು ಸಹಕಾರಿಯಾಗಲಿದೆ. ಇಂದು ಅವಕಾಶಗಳು ಮತ್ತು ಸ್ಪರ್ಧೆಗಳು ಅಧಿಕ ಸಂಖ್ಯೆಯಲ್ಲಿ ಇದ್ದು, ವಿದ್ಯಾರ್ಥಿಗಳು ಔದ್ಯೋಗಿಕ ತರಬೇತಿ ಕೇಂದ್ರಗಳತ್ತ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಅದರೆ ತಮ್ಮ ನೆಚ್ಚಿನ ಕ್ಷೇತ್ರಗಳ ಕುರಿತಾಗಿ ಸಮಗ್ರ ಮಾಹಿತಿ ಇಲ್ಲದ್ದರಿಂದ ಅದೆಷ್ಟೋ ವಿದ್ಯಾರ್ಥಿಗಳು ತಮಗೆದುರಾಗುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಇನ್ನು ಮುಂದೆ ಈ ರೀತಿ ವಿದ್ಯಾರ್ಥಿಗಳಿಗೆ ತೊಂದರೆಗಳಾಗದಿರಲು ಸಕ್ಸಸ್ ರನ್‌ವೇ ಸಹಕರಿಸಲಿದೆ.

ಅಂತರ್ಜಾಲ ಸಂಪರ್ಕದ ಮುಖಾಂತರ ವಿದ್ಯಾರ್ಥಿಗಳು ಸಿಇಟಿ, ಕಾಮೆಡ್ ಕೆ ಮುಂತಾದ ಪರೀಕ್ಷೆಗಾಗಿ ಸಿದ್ಧತೆಗಳನ್ನು ಉಚಿತವಾಗಿ ತಮ್ಮ ಮನೆಗಳಲ್ಲಿ, ಸೈಬರ್ ಕೆಫೆಗಳಲ್ಲಿ ಅಥವಾ ಇತರೆ ಯಾವುದೇ ಸ್ಥಳಗಳಲ್ಲಿ ಅಂತರ್ಜಾಲ ಸಂಪರ್ಕದ ಮುಖಾಂತರ ಮಾಡಬಹುದಾಗಿದ್ದು ಪರೀಕ್ಷಾ ಕುರಿತು ಗೊಂದಲ, ಸಂಶಯವಿದ್ದವರಿಗೆ ಸುಲಭವಾಗಿ ಪರಿಹಾರ ಒದಗಲಿದೆ.

ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇನ್ನು ಹೆಚ್ಚಿನ ಸವಲತ್ತುಗಳೊಂದಿಗೆ ಸಕ್ಸಸ್ ರನ್‌ವೇ ತನ್ನ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಲಿದೆ. ಸಕ್ಸಸ್ ರನ್ ವೇ ಯಂತಹ ಆಧುನಿಕ ತಂತ್ರಜ್ಞಾನಗಳು ಮುಂದಿನ ದಿನಗಳಲ್ಲಿ ತಮ್ಮ ಶಿಕ್ಷಣ ನೀಡಲು ಅನುಸರಿಸುವ ಮಾದರಿಯಿಂದಲೇ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಉತ್ತಮ ಪ್ರಭಾವ ಬೀರಲಿದೆ.

ಬೇಸ್:

1991 ರಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರಾರಂಭವಾದ ಪ್ರಾಥಮಿಕ ಶಿಕ್ಷಣ ಹಾಗೂ ತರಬೇತಿಯನ್ನು ಒದಗಿಸುವ ಸಂಸ್ಥೆಯನ್ನು ನುರಿತ ಶೈಕ್ಷಣಿಕ ಮುಖಂಡರು ಪ್ರಾರಂಭಿಸಿದ್ದರು. ಬೇಸ್‌ನ ಪ್ರಮುಖ ಉದ್ದೇಶ ವಿದ್ಯಾರ್ಥಿಗಳನ್ನು ವಿಜಯಶಾಲಿಯನ್ನಾಗಿಸುವುದು. ತರಬೇತಿ ಕಾರ್ಯಕ್ರಮಗಳಲ್ಲದೇ ಬೇಸ್ ಕರ್ನಾಟಕದಾದ್ಯಂತ ಇರುವ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರೋತ್ಸಾಹವನ್ನು ನೀಡಲಿದೆ.

ಕಳೆದ ವರ್ಷ (2007)ಬೇಸ್ ಮಾಡಿದ ಕೆಲವು ಸಾಧನೆಗಳು ಇಂತಿವೆ;66 ವಿದ್ಯಾರ್ಥಿಗಳು ಐಐಟಿ-ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಐಇಇಇ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಸಹಿತ ಶ್ರೇಷ್ಠ 100ರಲ್ಲಿ 43 ಮಂದಿ, ಹಾಗೂ ಶ್ರೇಷ್ಠ 10ರಲ್ಲಿ 5 ವಿದ್ಯಾರ್ಥಿಗಳು ಬೇಸ್‌ನಿಂದ ತರಬೇತಿ ಪಡೆದವರಾಗಿರುತ್ತಾರೆ.

45 ವಿದ್ಯಾರ್ಥಿಗಳು ಐಐಟಿ-ಜೆಇಇಯಲ್ಲಿನ ಉತ್ತಮ ಅಂಕಗಳಿಗಾಗಿ ಅಸೋಸಿಯೇಟ್ ಸೆಂಟ್ರಲ್ ಇನ್ಸಿಟಿಟ್ಯೂಷನ್ಸ್‌ಗೆ ಆಯ್ಕೆ ಆಗಿದ್ದಾರೆ. ಶ್ರೇಷ್ಠ ನೂರರಲ್ಲಿ 12 ಮಂದಿ ಸಿಇಟಿಯಲ್ಲಿ ರ್‍ಯಾಂಕ್ ಪಡೆದಿದ್ದಾರೆ.

ಎಕ್ಸೆಲ್ ಸಾಫ್ಟ್ ಟೆಕ್ನಾಲಜಿ ಪ್ರೈವೆಟ್ ಲಿಮಿಟೆಡ್:

ಮೈಸೂರು ಮೂಲದ ಎಕ್ಸೆಲ್ ಸಾಫ್ಟ್ ಎಂಬ ಸಾಫ್ಟ್‌ವೇರ್ ಕಂಪೆನಿಯು ಪರಿಹಾರಗಳನ್ನು ಇ-ಶಿಕ್ಷಣದ ಮೂಲಕ ನೀಡುತ್ತಿದೆ. 'ಪರೀಕ್ಷೆ ಮತ್ತು ಮೌಲ್ಯ ಮಾಪನ ಮುಖಾಂತರ ಎಕ್ಸೆಲ್ ಸಾಫ್ಟ್ ಪರಿಣಿತರಿಂದ ಮೌಲ್ಯಭರಿತ ವ್ಯವಹಾರಿಕ ಸೇವೆ, ಅಭಿವೃದ್ಧಿದಾಯಕ ಸೇವೆಗಳು, ಉತ್ಪನ್ನಗಳ ವಿನ್ಯಾಸ, ಇಂಜಿನಿಯರಿಂಗ್ ಮತ್ತು ಕಸ್ಟಮ್ ಸಾಫ್ಟ್‌ವೇರ್ ಇತ್ಯಾದಿಗಳಲ್ಲಿ ಹೆಸರುವಾಸಿ ಎನಿಸಿದೆ.

ಎಕ್ಸೆಲ್ ಸಾಫ್ಟ್, 'ಸರಸ್ ಎಂಬ ಸಾಫ್ಟ್‌ವೇರ್‌ನ್ನು ಪ್ರಾರಂಭಿಸಿದ್ದು ಇದು ಸಂಸ್ಥೆಗಳಿಗೆ, ಕಾರ್ಪೊರೇಷನ್‌ಗಳಿಗೆ, ಪ್ರಕಟಕರಿಗೆ ವಿವಿಧ ಮಾದರಿಯಲ್ಲಿ ಪರಿಹಾರ ಸೌಲಭ್ಯವುಳ್ಳವನ್ನು ಒದಗಿಸಲಿದೆ. ಪ್ರಸ್ತುತ, ವಿಪ್ರೊ, ವರ್ಡ್ ಬ್ಯಾಂಕ್, ಯುನೆಸ್ಕೊ, ಭಾರತ ಸರ್ಕಾರದ ದೂರ ಶಿಕ್ಷಣ ಅಭಿಯಾನ, ಪ್ರಥಮ ಕೆರೆಬಿಯನ್ ಅಂತರಾಷ್ಟ್ರೀಯ ಬ್ಯಾಂಕ್ ಮುಂತಾದವು "ಸರಸ್" ಸದಸ್ಯರಾಗಿದ್ದಾರೆ.

ಭಾರತದ ಕಂಪ್ಯೂಟರ್ ಸಂಸ್ಥೆಯಿಂದ ನೀಡಲಾದ 2003-04ರ ರಾಷ್ಟ್ರೀಯ ಐಟಿ ಪ್ರಶಸ್ತಿಯ 'ಬೆಸ್ಟ್ ಪ್ಯಾಕೇಜ್ಡ್ ಅಪ್ಲಿಕೇಷನ್ ವಿಭಾಗದಲ್ಲಿ 'ಸರಸ್ಗೆ ರನ್ನರ್ ಆಪ್ ಪ್ರಶಸ್ತಿ ಲಭಿಸಿತ್ತು. ಅಲ್ಲದೇ 2003ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ಸಿಸ್ಟಮ್ ಸೊಲ್ಯುಷನ್ ಬಿಲ್ಡರ್ ಎಂಬ ಪ್ರಶಸ್ತಿಯನ್ನು ಎಕ್ಸೆಲ್ ಸಾಫ್ಟ್ ತನ್ನದಾಗಿಸಿಕೊಂಡಿದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X