ಹುಬ್ಬಳ್ಳಿ ಕಿಮ್ಸ್ ಶೂಟೌಟ್: ಆರೋಪಿಗಳ ಬಂಧನ
ಹುಬ್ಬಳ್ಳಿ, ಜ21: ಕಿಮ್ಸ್ ಆಧ್ಯಕ್ಷ ಡಾ. ಶಿವಾನಂದ ದೊಡ್ಡಮನಿ ಮೇಲೆ ದಾಳಿ ಮಾಡಿದರೆನ್ನಲಾದ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಇದರಿಂದ ಶೂಟೌಟ್ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ.
ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡರಾದ ಬಂಗಾರೇಶ್ ಹಾಗೂ ವಿಶ್ವಪ್ರಕಾಶ್ ಅವರನ್ನು ಶಂಕಿತ ಆರೋಪಿಗಳೆಂದು ಪೊಲೀಸರು ಹೆಸರಿಸಿದ್ದು, ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯ ಕೇಂದ್ರದಲ್ಲಿ ಇಬ್ಬರು ಆರೋಪಿಗಳಿಗೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವಾಹನ ತುಡುಗರ ಬಂಧನ
ಹುಬ್ಬಳ್ಳಿ : ನಗರದಲ್ಲಿ ಸೋಮವಾರ ಮೂವರು ಅಂತಾರಾಜ್ಯ ವಾಹನಕಳ್ಳರನ್ನು ಬಂಧಿಸಲಾಗಿದ್ದು 30 ಲಕ್ಷ ಮೌಲ್ಯದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರಾದ ಕಿರಣ್ ಗೌಂಡಿ, ಮುನೀರ್ ಅಹ್ಮದ್ ಮತ್ತು ಹಮೀದ್ ಬಂಧಿತರು. ಮೂವರು ಮುಂಬೈನಿಂದ ಟ್ರವೇರಾ ಮತ್ತು ಸ್ಕಾರ್ಪಿಯೋ ವಾಹನಗಳನ್ನು ಕದ್ದಿದ್ದರೆಂದು ಪೊಲೀಸ್ ಕಮಿಷನರ್ ನಾರಾಯಣ ನಡುಮನಿ ಸುದ್ದಿಗಾರರಿಗೆ ತಿಳಿಸಿದರು. ಮೂವರನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಲಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications