ಪರ್ಥ್‌ನಲ್ಲಿ ಸಿಡಿದೆದ್ದ ಭಾರತದ ಕ್ರಿಕೆಟ್ ಕಲಿಗಳು
ಪರ್ಥ್, ಜ.19 : ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಗೆಲುವಿನ ನಾಗಾಲೋಟಕ್ಕೆ ಭಾರತ ಲಗಾಮು ಹಾಕಿದೆ. ವಿಶ್ವದಾಖಲೆಯ 17ನೇ ಟೆಸ್ಟ್ ವಿಜಯದ ಕನಸು ಕಾಣುತ್ತಿದ್ದ ಕಾಂಗರೂಗಳಿಗೆ ಭಾರತದ ಕ್ರಿಕೆಟ್ ಕಲಿಗಳು ಮಣ್ಣುಮುಕ್ಕಿಸಿದ್ದಾರೆ.
ಸಾಂಘಿಕ ಆಟವನ್ನು ಪ್ರದರ್ಶಿಸಿದ ಹನ್ನೊಂದೂ ಆಟಗಾರರು ಆಸ್ಟ್ರೇಲಿಯಾಕ್ಕೆ 72 ರನ್‌ಗಳ ಸೋಲನ್ನುಣಿಸಿದ್ದಾರೆ. ಬೌಲರ್‌ಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಿಕೊಂಡ ಭಾರತದ ನಾಯಕ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾದಲ್ಲಿ ಪ್ರಥಮ ಬಾರಿಗೆ ವಿಜಯದ ನಗೆ ನಕ್ಕಿದ್ದಾರೆ.
ಆರ್.ಪಿ.ಸಿಂಗ್ 2, ಇರ್ಫಾನ್ ಪಠಾಣ್ 3, ಕುಂಬ್ಳೆ 2, ಇಶಾಂತ್ ಶರ್ಮಾ 1, ಸೆಹ್ವಾಗ್ 2 ವಿಕೆಟ್ ಕಬಳಿಸಿದ್ದನ್ನು ನೋಡಿದರೆ ಭಾರತದ ದಾಳಿ ಹೇಗಿತ್ತೆಂಬುದರ ಅರಿವಾಗುತ್ತದೆ.
413 ರನ್‌ಗಳ ಬೆನ್ನತ್ತಿದ್ದ ಆಸೀಸ್ 294 ರನ್‌ಗಳಿಗೆ ಆಲೌಟಾಯಿತು. ಸಿಡ್ನಿಯಲ್ಲಿ ಆದ ಅವಮಾನಕ್ಕೆ ಪರ್ಥ್‌ನಲ್ಲಿ ಸೇಡು ತೀರಿಸಿಕೊಂಡಿದೆ.
ಒಟ್ಟು 5 ವಿಕೆಟ್ ಕಬಳಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿನಿಂದಲೂ ಉತ್ತಮ ಕಾಣಿಕೆ ನೀಡಿ ಅತ್ಯುತ್ತಮ ಆಲ್‌ರೌಂಡ್ ಆಟವಾಡಿದ ಇರ್ಫಾನ್ ಪಠಾಣ್ ಪಂದ್ಯದ ಪುರುಷೋತ್ತಮ ಪ್ರಶಸ್ತಿ ಪಡೆದರು.
(ದಟ್ಸ್‌ಕ್ರಿಕೆಟ್ ವಾರ್ತೆ)


Click it and Unblock the Notifications
