ಪರ್ಥ್ನಲ್ಲಿ ಆಸೀಸ್ಗೆ ಭಾರತ ಮಣ್ಣು ಮುಕ್ಕಿಸುವುದೇ?

VVS Lakshmanಬೆಂಗಳೂರು, ಜ. 18 : ಬೋರ್ಡಿನ ಮೇಲೆ 348 ರನ್ನು, ಬಗಲಲ್ಲಿ ಎಂಟು ವಿಕೆಟ್ಟು, ಒಟ್ಟು 6 ಅವಧಿಗಳನ್ನೊಳಗೊಂಡ ಎರಡು ದಿನದ ಆಟ ಬಾಕಿ. ಎರಡನೇ ಪಾಳಿಯ ಆಟದಲ್ಲಿ 400ಕ್ಕೂ ಹೆಚ್ಚು ರನ್ ಪೇರಿಸಿ ಟೆಸ್ಟ್ ಪಂದ್ಯ ಗೆಲ್ಲುವ ಸಾಹಸ ಮತ್ತು ಮಹತ್ವಾಕಾಂಕ್ಷೆ ಈಗ ಆಸ್ಟ್ರೇಲಿಯಾ ಎದುರಿಗಿದೆ. ಸಿಡ್ನಿ ಟೆಸ್ಟ್ ಪಂದ್ಯದ ಸೀಳುನಾಯಿಗಳ ದಂಡು ಗೆಲುವಿಗಾಗಿ ತಹತಹಿಸುತ್ತಿದೆ. ಕಮಾನ್ ಬಾಯ್ಸ್!

ಸಿಡ್ನಿ ಟೆಸ್ಟ್ ಗೆದ್ದು ಸತತ 16 ಟೆಸ್ಟ್ ಪಂದ್ಯಗಳ ಜಯ ಸಾಧಿಸಿರುವ ಆಸೀಸ್‌ಗೆ 17ನೇ ಪಂದ್ಯವನ್ನೂ ಗೆದ್ದು ಸ್ಟೀವ್ ವಾ ಸೃಷ್ಟಿಸಿದ್ದ ದಾಖಲೆಯನ್ನು ಮುರಿಯುವ ಚಟಪಡಿಕೆ. ಇತ್ತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಆಸೀಸ್‌ಗೆ ಪಾಠ ಕಲಿಸಲು ಕಾದುಕುಳಿತಿದೆ. ಮಾನಸಿಕವಾಗಿ ಗಟ್ಟಿಯಾಗಿರುವವರಿಗೆ ಜಯ ಗ್ಯಾರಂಟಿ.

ಆಟಕ್ಕೆ ಕಚ್ಚಿಕೊಳ್ಳುವುದರಲ್ಲಿ ಎತ್ತಿದ ಕೈ ಎನಿಸಿದ ವಿವಿಎಸ್ ಲಕ್ಷಣ್ ಅವರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೊಮ್ಮೆ ಭರ್ಜರಿ 79 ರನ್ನು. ನಾನು ನೈಟ್ ವಾಚ್ ಮನ್ ಅಲ್ಲ, ಹಗಲು ಬೇಟೆಗಾರ ಎಂದು ಸಾಧಿಸಿ ತೋರ್ಸಿದ ಇರ್ಫಾನ್ ಪಠಾಣ್ 46 ರನ್ ಗಳಿಸಿ ಭಾರತವನ್ನು ಸುರಕ್ಷಿತ ಎಂದು ಕರೆಯಬಹುದಾದ ಮೊತ್ತದತ್ತ ಕರೆದೊಯ್ದಿದ್ದಾರೆ. ಮೂರನೆ ದಿನ ಆಟ ಮುಗಿದಾಗ ಭಾರತ 294 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 413 ರನ್ ಬೆನ್ನತ್ತಲು ಆಸ್ಟ್ರೇಲಿಯಾಕ್ಕೆ ಪಣ ಒಡ್ಡಿದೆ.

ಪರ್ಥ್ ಮೈದಾನದಲ್ಲಿ ಇಲ್ಲಿಯವರೆಗೆ ಯಾವ ತಂಡವೂ 400 ರನ್ ಬೆನ್ನತ್ತಿ ಜಯವನ್ನು ಸಾಧಿಸಿಲ್ಲ. ಹಾಗೆಯೇ ಇಲ್ಲಿಯತನಕ ಆಸ್ಟ್ರೇಲಿಯಾ ಈ ಮೈದಾನದಲ್ಲಿ ಯಾವ ಪಂದ್ಯವನ್ನೂ ಸೋತಿಲ್ಲ. ಆಸ್ಟ್ರೇಲಿಯನ್ನರು 413 ರನ್ ಗಳಿಸಿ ದಾಖಲೆಯನ್ನು ಅಳಿಸಿಹಾಕುವರೇ ಅಥವ ಈಗಾಗಲೇ 65 ರನ್‌ಗಳಿಗೆ 2 ವಿಕೆಟ್ ಕಬಳಿಸಿರುವ ಕುಂಬ್ಳೆ ಪಡೆ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಸೋಲನ್ನು ಉಣಿಸುವುದೇ? ಇಲ್ಲಿಯತನಕ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಗಳಿಸಿದ ಅತಿ ಹೆಚ್ಚಿನ ಮೊತ್ತ 369 ಪಾಕ್ ವಿರುದ್ಧ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಆಸೀಸ್‌ ಮತ್ತು ಚಿರತೆಯಂತೆ ತಿರುಗಿಬಿದ್ದಿರುವ ಭಾರತ ; ಎರಡೂ ತಂಡಗಳನ್ನು ಕಡೆಗಣಿಸಲಾಗುವುದಿಲ್ಲ.

ಮುಗ್ಗರಿಸಿದ ಎರಡೂ ತಂಡಗಳು : ಎರಡನೇ ದಿನ 52 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಇಂದು ಆಟ ಮುಂದುವರಿಸಿ 294 ರನ್‌ಗಳಿಗೆ ಎರಡನೇ ಇನ್ನಿಂಗ್ಸ್‌ಗೆ ಮುಕ್ತಾಯ ಹಾಡಿತು. ಭಾರತವನ್ನು ಬಲುಬೇಗನೆ ಆಲೌಟ್ ಮಾಡಿದ ಕಾಂಗರೂಗಳಿಗೆ ಎರಡನೇ ಇನ್ನಿಂಗ್ಸ್‌ ಆರಂಭದಲ್ಲೇ ಆಘಾತ ಕಾದಿತ್ತು. ರೋಜರ್ಸ್ ಮತ್ತು ಜಾಕ್ವೆಸ್ ಜೋಡಿಯನ್ನು ಇರ್ಫಾನ್ ಪಠಾಣ್ ಆಗಲೇ ಪೆವಿಲಿಯನ್‌ಗೆ ಕಳಿಸಿದ್ದಾರೆ. ಬೆಳಗ್ಗೆ 8 ಗಂಟೆಗೆ ನಾಲಕ್ಕನೇ ದಿನದ ಆಟ ಪ್ರಾರಂಭ. ಸ್ಟಾರ್ ಕ್ರಿಕೆಟ್ ನೇರಪ್ರಸಾರದಲ್ಲಿ.

(ದಟ್ಸ್‌ಕ್ರಿಕೆಟ್ ವಾರ್ತೆ)

ಪೂರಕ ಓದಿಗೆ
ಜಂಬೋ 600 ವಿಕೆಟ್‌ಗಳ ಸರದಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+