ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಕಾಂಗ್ರೆಸ್ ನಾಯಕನ ಹುಡುಕಾಟದಲ್ಲಿದೆ

By Staff
|
Google Oneindia Kannada News

ರಾಜ್ಯ ಕಾಂಗ್ರೆಸ್ ನಾಯಕನ ಹುಡುಕಾಟದಲ್ಲಿದೆಬೆಂಗಳೂರು , ಜ.15: ಮುಂಬರುವ ವಿಧಾನಸಭಾ ಚುನಾಚಣೆಗೆ ಮೊದಲು ರಾಜ್ಯ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಪುನರ್ ರೂಪಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹೈ ಕಮಾಂಡ್ ಆದೇಶದ ಮೇರೆಗೆ ದೆಹಲಿಗೆ ಪಯಣಿಸಲಿದ್ದಾರೆ.

ತಮ್ಮ ಮುಂದಿನ ನಾಯಕನ ಆಯ್ಕೆ ಬಗ್ಗೆ ಅಭಿಪ್ರಾಯವನ್ನು ಮಂಡಿಸಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈ ಕಮಾಂಡ್ ಕೋರಿದೆ. ಚುನಾವಣೆಗೆ ಮೊದಲು ಕೆಪಿಸಿಸಿಯನ್ನು ಪುನರ್ ರಚಿಸಿ, ಹೊಸ ನಾಯಕನ ನೇತೃತ್ವದಲ್ಲಿ ಸಾಗಬೇಕಿದೆ. ಈ ನಿಟ್ಟಿನಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲು ಸಭೆ ಸೇರಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ತಿಳಿಸಿದರು.

ಹೈಕಮಾಂಡ್ ಒಲವು ಕೃಷ್ಣನತ್ತ:

ಹೈ ಕಮಾಂಡ್ ಮಹಾರಾಷ್ಟ್ರದ ರಾಜ್ಯಪಾಲ ಎಸ್ ಎಂ ಕೃಷ್ಣರವರು ಕರ್ನಾಟಕದ ಮುಂದಿನ ಚುನಾವಣೆಯ ನಾಯಕತ್ವ ವಹಿಸಿಕೊಳ್ಳಬೇಕೆಂಬ ಆಶಯ ಹೊಂದಿದೆ ಎನ್ನಲಾಗಿದೆ. ಆದರೆ ಎಸ್ ಎಂ ಕೃಷ್ಣರವರ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ಕೃಷ್ಣ ಅವರು ಸಕ್ರಿಯವಾಗಿ ರಾಜ್ಯದ ರಾಜಕಾರಣಕ್ಕೆ ಮರುಳಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಬಹುಮತದ ನಿರೀಕ್ಷೆ ಸಾಧ್ಯ ಎಂದು ಹಿರಿಯ ಕಾಂಗ್ರೆಸ್ ಮುಖಂಡರ ಅನಿಸಿಕೆ. ಜ್ಯಾತ್ಯಾತೀತ ಜನತಾದಳ ಜನರ ನಂಬಿಕೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಕೃಷ್ಣರವರ ಇರುವಿಕೆಯಿಂದ ಮಾತ್ರ ಸಾಧ್ಯೆ ಎಂಬುದು ಕಾಂಗ್ರೆಸ್ಸಿಗರ ಲೆಕ್ಕಾಚಾರ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X