ಪೇಜಾವರಶ್ರೀಗಳಿಂದ ಉಪವಾಸ ಆರಂಭ

ಉಡುಪಿ , ಜ.15: ಪರ್ಯಾಯ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಉಪವಾಸ ಪ್ರಾರಂಭಿಸಿದ್ದಾರೆ. ಉಪವಾಸ ಕೈ ಬಿಡುವಂತೆ ಪೇಜಾವರ ಶ್ರೀಗಳಿಗೆ ಪುತ್ತಿಗೆ ಶ್ರೀಗಳು ಮಾಡಿದ ಮನವಿಗೆ ಬೆಲೆ ಇಲ್ಲದಂತಾಗಿದೆ.

ಪುತ್ತಿಗೆ ಶ್ರೀಗಳಿಗೆ ಕೆಲವು ಪರಿಹಾರ ಸೂತ್ರಗಳನ್ನು ನೀಡಲಾಗಿದ್ದು, ಅದಕ್ಕೆ ಒಪ್ಪಿದರೆ ಮಾತ್ರಪೇಜಾವರ ಶ್ರೀಗಳು ಉಪವಾಸ ಕೈಬಿಡಲಿದ್ದಾರೆ ಎನ್ನಲಾಗಿದೆ. ಪರಿಹಾರ ಸೂತ್ರಗಳು ಧಾರ್ಮಿಕ ವಿಧಿ ವಿಧಾನಕ್ಕೆ ಸಂಬಂಧಿಸಿರದೆ ಕೆಲ ಲೌಕಿಕ ವಿಧಾನಕ್ಕೆ ಸಂಬಂಧಿಸಿದೆ ಎಂದು ತಿಳಿದು ಬಂದಿದೆ. ಆದರೆ, ಪುತ್ತಿಗೆ ಶ್ರೀಗಳು ಯಾವ ಸೂತ್ರಗಳನ್ನು ತಿರಸ್ಕರಿಸಿದ್ದಾರೆ. ಅವುಗಳು ಯಾವುದಕ್ಕೆ ಸಂಬಂಧಪಟ್ಟಿದೆ ಎಂಬ ವಿಷಯವನ್ನು ಮಾತ್ರ ಉಭಯ ಬಣಗಳು ಬಹಿರಂಗಪಡಿಸಿಲ್ಲ.

ಪೇಜಾವರರ ಆಶಾಭಾವನೆ:
ಪರ್ಯಾಯ ವಿವಾದ ಅಂತಿಮ ಘಟ್ಟದಲ್ಲಿದೆ. ನಾವು ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ. ಆದರೆ, ಪುತ್ತಿಗೆ ಶ್ರೀಗಳು ಪರಿಹಾರ ಸೂತ್ರಗಳಿಗೆ ಒಪ್ಪಿದರೆ, ಈ ದಿನ ಸಂಜೆಯೆ ಉಪವಾಸ ಅಂತ್ಯಗೊಳಿಸುವೆ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಬುಧವಾರದಿಂದ ಉತ್ತರಾಯಣ ಕಾಲ ಪ್ರಾರಂಭವಾಗುವುದರಿಂದ ಇದಕ್ಕೂ ಮೊದಲು ಪರಿಹಾರ ಕಂಡುಕೊಳ್ಳುವ ಆತುರ ಉಭಯ ಯತಿಗಳ ಬಣಗಳಲ್ಲಿ ಕಾಣಿಸಿದೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+