ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಪ್ರೆಸ್‌ಕ್ಲಬ್ 'ವರ್ಷದ ವ್ಯಕ್ತಿ'

Nisar Ahmed is Bangalore Press Club 'Man of the Year'ಬೆಂಗಳೂರು, ಡಿ.26 : ಮೇಷ್ಟ್ರು, ವಾಗ್ಮಿ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಅವರು ಬೆಂಗಳೂರು ಪ್ರೆಸ್‌ಕ್ಲಬ್ ನೀಡುತ್ತಿರುವ 'ವರ್ಷದ ವ್ಯಕ್ತಿ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಿಸಾರ್ ಅಹ್ಮದ್ ಅವರಿಗೆ 2007ನೇ ಸಾಲಿನ ಪ್ರಶಸ್ತಿಗೆ ಪಾತ್ರರಾಗಿರುವುದನ್ನು ಪ್ರೆಸ್‌ಕ್ಲಬ್ ಅಧ್ಯಕ್ಷ ಇ.ವಿ.ಸತ್ಯನಾರಾಯಣ(ಪ್ರಜಾವಾಣಿ) ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಹಿರಿಯ ಪತ್ರಕರ್ತ ಕೆ.ಶ್ರೀಧರ ಆಚಾರ್(ನಿವೃತ್ತ ಸಂಪಾದಕ, ಪ್ರಜಾವಾಣಿ) ಮತ್ತು ಕೆ.ಬಾಬುರಾಜ್(ಸುದ್ದಿ ಛಾಯಾಗ್ರಾಹಕ) ಅವರಿಗೆ ಪ್ರೆಸ್‌ಕ್ಲಬ್‌ನ 'ವಾರ್ಷಿಕ ಪ್ರಶಸ್ತಿ' ಸಂದಿದೆ ಎಂದು ಸತ್ಯನಾರಾಯಣ ತಿಳಿಸಿದರು.

ಡಿಸೆಂಬರ್ 31ರ ಸಂಜೆ ಪ್ರೆಸ್‌ಕ್ಲಬ್ ಅಂಗಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದೇ ದಿನ 2008 ವರ್ಷದ ‌ಡೈರಿಯನ್ನೂ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+