ದತ್ತಪೀಠ ಹಿಂದೂಗಳದ್ದು,ಅವರಿಗೆ ಹಸ್ತಾಂತರಿಸಿ

Image courtesy : communalism.blogspot.comಬೆಂಗಳೂರು, ಡಿ. 26: ಚಿಕ್ಕಮಗಳೂರು ಜಿಲ್ಲೆಯ ವಿವಾದಾತ್ಮಕ ದತ್ತಪೀಠವು ನಿಸ್ಸಂದೇಹವಾಗಿ ಹಿಂದೂಗಳಿಗೆ ಸೇರಿದುದಾಗಿದೆ. ಆದ್ರಿಂದ ಅದರ ಆಡಳಿತವನ್ನು ಮುಸ್ಲಿಂರಿಂದ ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಸಂಶೋಧಕ, ಸಾಹಿತಿ ಪ್ರೊ. ಚಿದಾನಂದಮೂರ್ತಿ ಅವರು "ಸಂಬಂಧಪಟ್ಟ ಅಧಿಕಾರಿಗಳನ್ನು" ಒತ್ತಾಯಿಸಿದ್ದಾರೆ.

ರೆವೆನ್ಯೂ ದಾಖಲೆಗಳ ಪ್ರಕಾರ ವಿವಾದಾತ್ಮಕ ದತ್ತ ಸ್ಥಳ ಹಿಂದೂಗಳಿಗೆ ಸೇರಿದೆ. ಹಿಂದೂಗಳು ಅಲ್ಲಿ ಮುಂಚೆಯಿಂದಲೂ ಪೂಜೆ ಹಾಗೂ ಧಾರ್ಮಿಕ ವಿಧಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಾಬಾಬುಡನ್ ಅಸಲಿ ದರ್ಗಾ ನಾಗನಹಳ್ಳಿ ಕಂದಾಯ ವ್ಯಾಪ್ತಿಗೆ ಸೇರಿದ್ದಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಿಂದ ತುಂಬಾ ದೂರದಲ್ಲಿದೆ. ದತ್ತಪೀಠವು ಕಂದಾಯ ದಾಖಲೆಗಳ ಪ್ರಕಾರ ನಿಸ್ಸಂಶಯವಾಗಿ ಹಿಂದೂಗಳಿಗೆ ಸೇರಿದೆ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಈ ಭೂಮಿ, ಈ ಜಾಗ, ಈ ತಾಣ ನಮ್ಮದು ಎಂದು ಮುಸ್ಲಿಂಮರು ಹೇಳುತ್ತಿರುವುದು ವಂಚನೆಯಲ್ಲದೆ ಮತ್ತೇನಲ್ಲ. ಅಲ್ಲದೆ, ದತ್ತಪೀಠದ ಸುತ್ತಮುತ್ತ ರೆಸಾರ್ಟ್‌ಗಳನ್ನು ಸ್ಥಾಪಿಸಲು, ಮನರಂಜನಾ ತಾಣಗಳನ್ನು ತೆರೆಯಲು ಉತ್ತೇಜಿಸಲಾಗುತ್ತಿದೆ. ರೆಸಾರ್ಟ್‌ಗಳಲ್ಲಿ ಉಗ್ರವಾದಿಗಳು ತಲೆಮರೆಸಿಕೊಳ್ಳಲು ಸಹಾಯವಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಹೊಸಪೇಟೆಯ ಹಂಪಿ ನಮ್ಮ ಕಣ್ಮುಂದೆ ಇದೆ ಎಂದು ಚಿದಾನಂದ ಮೂರ್ತಿ ಹೇಳಿದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+