ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರಧಾಮ ಗುಡಿಗೆ ಗಿನ್ನೆಸ್ ದಾಖಲೆಯ ಗರಿ

By Staff
|
Google Oneindia Kannada News

ನವದೆಹಲಿ, ಡಿ.26: ಇಲ್ಲಿನ ಪ್ರಸಿದ್ಧ ಅಕ್ಷರಧಾಮ ದೇವಸ್ಥಾನ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹಿರಿಮೆಗೆ ಪಾತ್ರವಾಗಿದ್ದು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ.

ಅದ್ಭುತ ಶಿಲ್ಪಕಲಾ ಸೌಂದರ್ಯದಿಂದ ಕೂಡಿದ, ಕರಕುಶಲ ಕೆತ್ತನೆಗೆ ಹೆಸರಾಗಿರುವ ದೆಹಲಿಯ ಅಕ್ಷರಧಾಮ ದೇವಾಲಯ ವಿಶ್ವದಲ್ಲೇ ಅತಿದೊಡ್ಡ ದೇವಾಲಯ ಸಂಕೀರ್ಣವಾಗಿ ಗುರುತಿಸಿಕೊಂಡಿದೆ ಎಂದು ಗಿನ್ನಿಸ್ ದಾಖಲೆ ಪತ್ರದಲ್ಲಿ ತಿಳಿಸಲಾಗಿದೆ.

ವಾರದ ಹಿಂದೆ ಭಾರತಕ್ಕೆ ಆಗಮಿಸಿದ್ದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಲಿ.ನ ಹಿರಿಯ ಸದಸ್ಯ ಮೈಕೆಲ್ ವಿಟ್ಟಿ ಅವರು ಸ್ವಾಮಿನಾರಾಯಣ್ ಸಂಸ್ಥಾನದ ಧರ್ಮದರ್ಶಿ ಪ್ರಮುಖ್ ಸ್ವಾಮಿ ಮಹರಾಜ್ ಅವರಿಗೆ ಗಿನ್ನಿಸ್ ದಾಖಲೆಯ ಎರಡು ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದ್ದಾರೆ. ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ ಹಾಗೂ ಒಬ್ಬನೇ ವ್ಯಕ್ತಿಯಿಂದ ಬಹಳಷ್ಟು ಹಿಂದೂ ದೇವಾಲಯಗಳ ಪವಿತ್ರೀಕರಣ ದಾಖಲೆಗಾಗಿ ಎರಡು ಪ್ರಮಾಣಪತ್ರಗಳು.

ಸ್ವಾಮಿನಾರಾಯಣ ಸಂಸ್ಥಾನದ ಮುಖ್ಯಸ್ಥರಾಗಿರುವ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಅಂತಾರಾಷ್ಟ್ರೀಯ ಮಟ್ಟದ ಅತ್ಯಂತ ಪೂಜನೀಯ ಧಾರ್ಮಿಕ ಮುಖಂಡರು. 1971ರ ಏಪ್ರಿಲ್ ಮತ್ತು 2007ರ ನವೆಂಬರ್ ನಡುವೆ ವಿಶ್ವದಾಖಲೆಯ 713 ಮಂದಿರಗಳನ್ನು ಐದು ಖಂಡಗಳಲ್ಲಿ ಹಿಂದೂ ಧಾರ್ಮಿಕವಿಧಿಗಳ ಪ್ರಕಾರ ಅವರು ಸ್ಥಾಪಿಸಿದ್ದಾರೆ ಎಂದು ಗಿನ್ನಿಸ್ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

(ಏಜನ್ಸೀಸ್)

ಅಕ್ಷರಧಾಮ ಆಲಯದ ಮತ್ತಷ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X