ಪ್ರವೀಣ್ ಮಹಾಜನ್ ಅಪರಾಧಿ : ಮುಂಬೈ ನ್ಯಾಯಾಲಯ ತೀರ್ಪು
ಮುಂಬೈ, ಡಿ.17 : ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಮಹಾಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸೋದರ ಪ್ರವೀಣ್ ಮಹಾಜನ್ ದೋಷಿ ಎಂದು ಮುಂಬೈನ ಸೆಷನ್ಸ್ ನ್ಯಾಯಾಲಯ ಸೋಮವಾರ (ಡಿ. 17) ತೀರ್ಪು ಪ್ರಕಟಿಸಿದೆ. ಮಂಗಳವಾರ (ಡಿ.17) ಅಪರಾಧಕ್ಕೆ ಸಂಬಂಧಿಸಿದ ಶಿಕ್ಷೆಯನ್ನು ಜಾರಿಮಾಡಲಿದೆ.
ಏ.22, 2006ರಲ್ಲಿ ಪ್ರಮೋದ್ ಮಹಾಜನ್ ಮೇಲೆ ಪ್ರವೀಣ್ ಮಹಾಜನ್ ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಪ್ರವೀಣ್‌ರನ್ನು ಬಂಧಿಸಿದ್ದರು ಸಹಾ. ಈ ಕುರಿತು ಪೋಲೀಸರು 650 ಪುಟಗಳ ದೋಷಾರೋಪ ಪಟ್ಟಿಯನ್ನೂ ಕೋರ್ಟ್‌ಗೆ ಸಲ್ಲಿಸಿದ್ದರು. ಗುಂಡಿನ ದಾಳಿಗೂ ತನಗೂ ಸಂಬಂಧವಿಲ್ಲವೆಂದು ಪ್ರವೀಣ್ ಕೋರ್ಟ್‌ನಲ್ಲಿ ವಾದಿಸಿದ್ದರು. ಆದ್ದರಿಂದ ವಿಚಾರಣೆಗೆ ಸುದೀರ್ಘ ಕಾಲಾವಕಾಶ ತೆಗೆದುಕೊಂಡಿದೆ. ಅಂತಿಮವಾಗಿ ನ್ಯಾಯಾಲಯ ಪ್ರವೀಣ್ ಮಹಾಜನ್‌ರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ.
ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ಬಿಳಿ ಬಣ್ಣದ ಪೈಜಾಮ ತೊಟ್ಟಿದ್ದ ಪ್ರವೀಣ್ ಉದ್ವೇಗಕ್ಕೆ ಒಳಗಾಗದೆ ತೀರ್ಪನ್ನು ಅಂಗೀಕರಿಸಿದರು. ಕಳೆದ ಹತ್ತು ದಿನಗಳಿಂದ ನ್ಯಾಯಾಲಯದಲ್ಲಿ ಈ ತೀರ್ಪನ್ನು ಕೇಳಿ ಕೇಳಿ ನನಗೆ ಅಭ್ಯಾಸವಾಗಿತ್ತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ತೀರ್ಪನ್ನು ಕೇಳುತ್ತಿದ್ದಂತೆ ಪ್ರವೀಣ್‌ರ ಪತ್ನಿ ಸಾರಂಗಿ ಕುಸಿದು ಬಿದ್ದರು. ಪತ್ನಿಯ ಅಣ್ಣ ಉಚ್ಚನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications