ಪ್ರಕಾಶ್ ಪಕ್ಷ ಸೇರ್ಪಡೆಗೆ ಗುಜರಾತ್ ಚುನಾವಣೆ ನಿರ್ಣಾಯಕ
ಹುಬ್ಬಳ್ಳಿ, ಡಿ.17 : ಗುಜರಾತ್ ಚುನಾವಣೆಯ ಫಲಿತಾಂಶ ತಾವು ಮತ್ತು ತಮ್ಮ ಬೆಂಬಲಿಗರು ಯಾವುದೇ ಪಕ್ಷ ಸೇರ್ಪಡೆಗೆ ನಿರ್ಣಾಯಕವಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಯು ಮತ್ತು ಬಿಎಸ್‌ಪಿ ಪಕ್ಷಗಳು ತಮಗೆ ಆಹ್ವಾನ ನೀಡಿದ್ದು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಪ್ರಕಾಶ್ ಸೋಮವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಗುಜರಾತ್‌ನಲ್ಲಿ ನರೇಂದ್ರ ಸಿಂಗ್ ಮೋದಿ ಸರ್ಕಾರ ಬಹುಮತದೊಂದಿಗೆ ಆಯ್ಕೆಯಾಗಿ ಬರುವ ಸಾಧ್ಯತೆಯನ್ನು ಚುನಾವಣೋತ್ತರ ಸಮೀಕ್ಷೆಗಳು ಬಿತ್ತರಿಸುತ್ತಿದ್ದರೆ ಪ್ರಕಾಶ್ ನೀಡಿರುವ ಈ ಹೇಳಿಕೆ ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಡಲಿದೆ.
ಜೆಡಿಎಸ್‌ನಲ್ಲಿ ಯಾವುದೇ ಆಂತರಿಕ ಪ್ರಜಾಪ್ರಭುತ್ವ ಇಲ್ಲದ್ದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಕಾರ್ಯವೈಖರಿಯಿಂದ ಸಾಕಾಗಿ ಹೋಗಿತ್ತು ಎಂದು ಪ್ರಕಾಶ್ ನುಡಿದರು.
ಜೆಡಿಎಸ್‌ನಲ್ಲಿ ತೆಗೆದುಕೊಳ್ಳಲಾದ ಏಕಪಕ್ಷೀಯ ನಿರ್ಣಯಗಳೇ ಅದಕ್ಕೆ ಗುಡ್‌ಬೈ ಹೇಳಲು ಕಾರಣವಾಯಿತು ಎಂದು ಅವರು ನುಡಿದರು. ರಾಜ್ಯದಲ್ಲಿ ಏಪ್ರಿಲ್ ಮೂರನೇ ವಾರ ವಿಧಾನಸಭೆ ಚುನಾವಣೆ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
(ಯುಎನ್ಐ)
ಪ್ರಕಾಶ್‌ಗೆ ಉನ್ನತ ಸ್ಥಾನಮಾನ : ಯಡಿಯೂರಪ್ಪ ಆಮಿಷ












Click it and Unblock the Notifications