ಆಂಟೆನಾ : ಚಂದ್ರಯಾನಕ್ಕೆ ಬೆಂಗಳೂರಿನಿಂದ ಸಂದೇಶ!

ಆಂಟೆನಾ : ಚಂದ್ರಯಾನಕ್ಕೆ ಬೆಂಗಳೂರಿನಿಂದ ಸಂದೇಶ!ಬೆಂಗಳೂರು, ಡಿ.17 : ಭಾರತೀಯ ಅಂತರಿಕ್ಷ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ1ಕ್ಕೆ ಸಂಪರ್ಕ ಕಲ್ಪಿಸುವ ಆಂಟೆನಾವನ್ನು ನಗರದ ಹೊರವಲಯದಲ್ಲಿರುವ ಬ್ಯಾಲಾಳುವಿನಲ್ಲಿ ಸ್ಥಾಪಿಸಿದೆ. ಈ ರೀತಿಯ ಸಂಪರ್ಕ ವ್ಯವಸ್ಥೆ ಚೀನಾ, ಜಪಾನ್, ರಷ್ಯಾ, ಯೂರೋಪ್ ಹಾಗೂ ಯುಎಸ್‌ಗಳಲ್ಲಿ ಮಾತ್ರ ಇದೆ ಎಂದು ಇಸ್ರೋದ ನಿರ್ದೇಶಕರಾದ (ಟೆಲಿಮೆಟ್ರಿ, ಟ್ರಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌) ಎಸ್.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸ್ವದೇಶಿ ತಂತ್ರಜ್ಞಾನದಿಂದ ಸ್ಥಾಪಿಸಲಾದ ಈ ಆಂಟೆನಾದ ವ್ಯಾಸ 32 ಮೀಟರ್‌ಗಳು. ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿರುವ ಬ್ಯಾಲಾಳುವಿನ 135 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಏ.9, 2008ಕ್ಕೆ ಚಂದ್ರನ ಅಧ್ಯಯನಕ್ಕಾಗಿ ಚಂದ್ರಯಾನ-1ಉಪಗ್ರಹ ಉಡಾವಣೆಯಾಗಲಿದೆ. ಈ ಆಂಟೆನಾ ಮೂಲಕ ಚಂದ್ರಯಾನ1ಕ್ಕೆ ಸಂದೇಶ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರೂ.100ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಆಂಟೆನಾ ಭವಿಷ್ಯದ ಮುಂದಿನ ಯಾನಗಳಿಗೂ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಚಂದ್ರಯಾನ1ರ ಮೂಲಕ ಚಂದ್ರನ ಮೇಲಿನ ಖನಿಚ ನಿಕ್ಷೇಪಗಳು, ಹೀಲಿಯಂ, ಧ್ರುವ ಪ್ರದೇಶಗಳಲ್ಲಿ ನೀರಿನ ಶೋಧ ಕೈಗೊಳ್ಳಲಾಗುತ್ತದೆ. ಸಾರಿಗೆ, ಸಂಪರ್ಕಕ್ಕೆ ಹಾಗೂ ಇತರ ವೈಜ್ಞಾನಿಕ ಕಾರಣಗಳಿಗೆ ಬ್ಯಾಲಾಳು ಅನುಕೂಲವಾದ ಕಾರಣ ಆಂಟೆನಾವನ್ನು ಇಲ್ಲಿ ಸ್ಥಾಪಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+