ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ,ಪಾಕ್ ಸೇರಿದಂತೆ ಇಂಡೋನೇಷಿಯಾಲ್ಲಿ ಭೂಕಂಪ

By Staff
|
Google Oneindia Kannada News

ಇಂಡೋನೇಷಿಯಾ, ನ.26 : ಇಂಡೋನೇಷಿಯಾದಲ್ಲಿ ಎರಡು ಬಾರಿ ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ. ಸುಂಭಾವಾ ದ್ವೀಪದಲ್ಲಿ ಭಾನುವಾರ(ನ.25) ಮತ್ತು ಸೋಮವಾರ (ನ.26) ರಂದು ಭೂಮಿ ಕಂಪಿಸಿ ಜನರನ್ನು ಭಯಬೀತಗೊಳಿಸಿದೆ.

ಭಾನುವಾರ ಸಂಭವಿಸಿದ ಭೂಕಂಪನದ ಪ್ರಮಾಣವ 5.0 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಸೋಮವಾರದ ಕಂಪನ ಇದಕ್ಕಿಂತಲೂ ತೀವ್ರವಾಗಿದ್ದು ಅದರ ಪ್ರಮಾಣ 6.7 ಎಂದು ರಿಕ್ಟರ್ ಮಾಪಕದಲ್ಲಿ ನಮೂದಾಗಿದೆ.

ಭೂಕಂಪದಲ್ಲಿ ಇಬ್ಬರು ಸತ್ತಿದ್ದು, 45 ಮಂದಿ ಗಾಯಗೊಂಡಿದ್ದಾರೆ. ಅನೇಕ ಭವನಗಳೂ ಉರುಳಿ ಬಿದ್ದಿವೆ. ಸುಮಾತ್ರಾದಲ್ಲೂ ಭೂಮಿ ಕಂಪಿಸಿದ್ದರಿಂದ ಜನ ಭಯಬೀತರಾಗಿ ಮನೆಗಳಿಂದ ಹೊರಬಂದಿದ್ದರು. ಭೂಮಿ ಕಂಪಿಸಿದ್ದನ್ನು ಕಂಡು ಇಂಡೋನೇಷಿಯಾದಲ್ಲಿ ಸುನಾಮಿ ಎಚ್ಚರಿಕೆ ಕೊಡಲಾಗಿತ್ತು ಎಂದು ತಿಳಿದುಬಂದಿದೆ.

ಭಾರತದಲ್ಲೂ ಭೂಮಿ ಕಂಪಿಸಿದ ಘಟನೆ ಸೋಮವಾರ(ನ.26) ವರದಿಯಾಗಿದೆ. ನೋಯ್ಡಾ, ಗೊರಗಾವ್, ಫರೀದಾಬಾದ್‌ಗಳಲ್ಲಿ ಕಂಪನದ ತೀವ್ರತೆ 4.3 ಎಂದು ರಿಕ್ಟರ್‌ನಲ್ಲಿ ನಮೂದಾಗಿದೆ. ಕಂಪನದ ಸದ್ದು ಕೇಳಿ ಜನ ಮನೆಬಿಟ್ಟು ಹೊರ ಓಡಿಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾಗೆಯೇ ಪಾಕಿಸ್ಥಾನಕ್ಕೂ ಭೂಕಂಪ ವಿಸ್ತರಿಸಿದೆ. ಅಲ್ಲಿನ ತೀವ್ರತೆ 4.2 ಎಂದು ನಮೂದಾಗಿದೆ. ಈ ಘಟನೆಗಳಲ್ಲಿ ಯಾವುದೇ ಪ್ರಾಣ ನಷ್ಟ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X