ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ಮೊದಲ ವಾರ ಬೆಂಗಳೂರಿನಲ್ಲಿ ಹಬ್ಬವೋ ಹಬ್ಬ!

By Staff
|
Google Oneindia Kannada News

ಬೆಂಗಳೂರು, ನ.26 : ಹತ್ತು ದಿನಗಳ ಸಾಂಸ್ಕೃತಿಕ ಉತ್ಸವ 'ಬೆಂಗಳೂರು ಹಬ್ಬ' ನ.30ರಿಂದ ಆರಂಭಗೊಳ್ಳಲಿದೆ. ಡಿ.9ರ ತನಕ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಯಲಿವೆ. ಸತತ ಏಳು ವರ್ಷಗಳಿಂದ ಈ ಹಬ್ಬವನ್ನು ಎಎಫ್ಎಫ್ಎ ಆಯೋಜಿಸಿಕೊಂಡು ಬರುತ್ತಿದೆ ಎಂದು ಫೌಂಡೇಷನ್ನಿನ ಟ್ರಸ್ಟಿ ನಂದಿನಿ ಆಳ್ವ ಸೋಮವಾರ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ಪ್ರತಿವರ್ಷ ಹೊಸತನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ಕೇವಲ ಬೆಂಗಳೂರಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ನೃತ್ಯ, ಹಾಡು, ಸಂಗೀತ ಕ್ಷೇತ್ರದ ಪ್ರತಿಭೆಗಳಿಗೆ ನಾವು ವೇದಿಕೆ ಕಲ್ಪಿಸುತ್ತಾ ಬಂದಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲ ಮೂರ್ತಿ,ಸರ್ಕಾರ ಮತ್ತುಸಾರ್ವಜನಿಕರ ಸಹಭಾಗಿತ್ವದಲ್ಲಿ ಹಬ್ಬ ನಡೆಯಲಿದೆ. ಕನ್ನಡತನವನ್ನು ಹಬ್ಬ ಬಿಂಬಿಸಲಿದೆ. ಡಾ.ಎಲ್.ಸುಬ್ರಹ್ಮಣ್ಯಂ ಮತ್ತು ಅಂಬಿ ಸುಬ್ರಹ್ಮಣ್ಯಂ, ಅದಿತಿ ಮಂಗಳದಾಸ್, ರೋಣು ಮಂಜೂಂದಾರ್,ಕದ್ರಿ ಗೋಪಿನಾಥ್, ಪಂಡಿತ್ ವಿಶ್ವನಾಥ್ ಮೋಹನ್ ಭಟ್ ಸೇರಿದಂತೆ 400ಕಲಾವಿದರು ಬೆಂಗಳೂರು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X