ವಿದ್ಯಾರ್ಥಿಗೆ ಮೂತ್ರ ಕುಡಿಸಿದಳು; ಶಿಕ್ಷಕಿ ರೂಪದ ರಕ್ಕಸಿ!
ತ್ರಿಶ್ಯೂರ್ , ನ.07 : ಶಿಕ್ಷಕರು ಯಾಕೆ ಹೀಗೆ? ದಂಡಂ ದಶಗುಣಂ ಎಂಬ ಮಾತನ್ನು ಶಿಕ್ಷಕರು ಅಪಾರ್ಥ ಮಾಡಿಕೊಂಡು, ಮಕ್ಕಳನ್ನು ಹಿಂಸಿಸುವ ಪ್ರಕರಣಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗೆ ಮೂತ್ರ ಕುಡಿಸಿದ ಶಿಕ್ಷಕಿಯೊಬ್ಬಳು ಕೇರಳದಲ್ಲಿ ಪತ್ತೆಯಾಗಿದ್ದಾಳೆ. ಸಂಪೂರ್ಣ ಸಾಕ್ಷರತೆಯ ರಾಜ್ಯ ಎಂದು ಖ್ಯಾತವಾದ ಕೇರಳದಲ್ಲಿಯೇ ಈ ಘಟನೆ ನಡೆದಿರುವುದು ವಿಪರ್ಯಾಸಕರ.
ತ್ರಿಶ್ಯೂರ್ ಸಮೀಪದ ಗ್ರಾಮವೊಂದರ ಅಂಗನವಾಡಿ ಶಾಲಾ ಕೊಠಡಿಯಲ್ಲಿ 3ವರ್ಷದ ಮಗುವೊಂದು ಮೂತ್ರ ವಿಸರ್ಜನೆ ಮಾಡಿಕೊಂಡಿತು. ತೀವ್ರ ಅಸಹನೆ ಪ್ರದರ್ಶಿಸಿದ ಶಿಕ್ಷಕಿ, ಬಲವಂತದಿಂದ ಮಗುವಿಗೆ ಆ ಮೂತ್ರ ಕುಡಿಸಿದ್ದಾಳೆ ಎಂಬುದು ಸ್ಥಳೀಯರ ದೂರು. ಈ ಸಂಬಂಧ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ.
ಮಕ್ಕಳ ಲೈಂಗಿಕ ಶೋಷಣೆ, ಅತ್ಯಾಚಾರ, ಅಮಾನವೀಯ ಶಿಕ್ಷೆ ನೀಡುವಿಕೆ ಸೇರಿದಂತೆ ಅನಾಗರಿಕ ಪದ್ಧತಿಗಳನ್ನು ಕೆಲವು ಶಿಕ್ಷಕರು ಅನುಸರಿಸುತ್ತಾರೆ. ಇಂಥ ಕೆಲವು ಶಿಕ್ಷಕರಿಂದ, ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು. ಇಂಥ ಪ್ರಕರಣಗಳಿಂದ ಬೆಚ್ಚಿದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆಮುಂದೆ ನೋಡಿದರೆ ಅಚ್ಚರಿಯೇನಿಲ್ಲ.
(ಏಜನ್ಸೀಸ್)












Click it and Unblock the Notifications