ಡೆಲ್ಲಿಯಲ್ಲಿ ಚೆಂಡು : ಕೇಂದ್ರ ಸಚಿವರಿಗೆ ರಾಜ್ಯಪಾಲರ ವರದಿ
ನವದೆಹಲಿ, ನ.06 : ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರನ್ನು ಭೇಟಿ ಮಾಡಿದ ರಾಜ್ಯಪಾಲ ರಾಮೇಶ್ವರ ಠಾಕೂರ್, ಕರ್ನಾಟಕ ರಾಜಕಾರಣದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಮಂಗಳವಾರ(ನ.06)ವಿವರಿಸಿದರು.
ಅ.31ರಿಂದ ಈವರೆಗಿನ ಎಲ್ಲಾ ವರ್ತಮಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ ರಾಜ್ಯಪಾಲರು, ಸರ್ಕಾರ ರಚನೆಗೆ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಲಿಲ್ಲವೆಂದು ಬಿಜೆಪಿ ಅಸಮಧಾನಗೊಂಡಿರುವ ಸಂಗತಿಯನ್ನೂ ಹೇಳಿದರು. ನಂತರ ಗಣರಾಜ್ಯಕ್ಕೆ ಸಂಬಂಧಿಸಿದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳಿದರು.ರಾಷ್ಟ್ರಪತಿಗಳನ್ನು ರಾಜ್ಯಪಾಲರು ಭೇಟಿ ಮಾಡುವ ಸಾಧ್ಯತೆಗಳಿವೆ. ರಾಜ್ಯದ ಸದ್ಯದ ಪರಿಸ್ಥಿತಿಯನ್ನು ವಿವರಿಸುವ ರಾಜ್ಯಪಾಲರು, ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಕೇಂದ್ರಕ್ಕೆ ಬಿಟ್ಟು, ಬಿಜೆಪಿ ಒತ್ತಡದಿಂದ ಪಾರಾಗಲಿದ್ದಾರೆ.
ಇತ್ತ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ 129ಶಾಸಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಎದುರು ಪರೇಡ್ ನಡೆಸಲು ಸಜ್ಜಾಗಿದ್ದಾರೆ.
(ಏಜನ್ಸೀಸ್)












Click it and Unblock the Notifications