ಹೆಚ್ಐವಿ ವಿರುದ್ಧ ಸೆಣಸಿದ ವೀಣಾಧರಿ ಕೊಲೆಗೀಡಾದಳೇ?

ಹೆಚ್ಐವಿ ಪೀಡಿತರ ಆಶಾಕಿರಣವಾಗಿದ್ದ ವೀಣಾಧರಿ ಸಾವನ್ನು ಕೊಲೆ ಎಂದು ಆಕೆಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಈ ವಿಚಾರವನ್ನು ವೀಣಾಧರಿ ಸಹೋದರ ಶಿವಪ್ರಕಾಶ್(ವೀಣಾಧರಿ ಸಹೋದರ)ಮತ್ತು ಅವರ ಆತ್ಮೀಯರಾದ ರಾಮದಾಸ್, ಪುತ್ತೂರಿನ ಶಶಿ ಪ್ರಸ್ತಾಪಿಸಿದ್ದಾರೆ. ವೀಣಾಧರಿ ಮೆದುಳಿನ ಆಘಾತದಿಂದ ಸತ್ತಿಲ್ಲ, ಔಷಧಿ ಕಂಪನಿಗಳ ಮಾಫಿಯಾಗೆ ಬಲಿಯಾಗಿದ್ದಾಳೆ ಎಂಬುದು ಅವರ ದೂರು.

ನನ್ನಕ್ಕೆ ವೀಣಾಧರಿ ಔಷಧಿ ಮಾಫಿಯಾದಿಂದ ನೊಂದಿದ್ದಳು. ಆ ಸತ್ಯಗಳನ್ನು ಅ.ಎರಡನೇ ವಾರ ಸ್ಫೋಟಿಸುವುದಾಗಿ ನನ್ನ ಬಳಿ ತಿಳಿಸಿದ್ದಳು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಕೆಗೆ ಯಾತನೆ ನೀಡಿದ್ದಾರೆ ಎಂದು ಶಿವಪ್ರಕಾಶ್ ಹೇಳಿದರು.

ಈ ಆಸ್ಪತ್ರೆಯಿಂದ ನನಗೆ ಮುಕ್ತಿ ನೀಡಿ. ಇವರು ನನ್ನನ್ನು ಕೊಲ್ಲುತ್ತಾರೆ. ಕೂಡಲೇ ನನ್ನನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಿ ಎಂದು ವೀಣಾ ಕೊನೆ ದಿನಗಳಲ್ಲಿ ಹೇಳುತ್ತಿದ್ದಳು. ವೀಣಾ ಅವರ ಡೈರಿಯನ್ನು ತೆರೆದರೆ, ಸತ್ಯಗಳು ಹೊರಬರುತ್ತವೆ ಎಂದು ಆತ್ಮೀಯರು ಅಭಿಪ್ರಾಯಪಟ್ಟರು.

***

ಪಾಕಿಸ್ತಾನದಲ್ಲಿ ಜನತಂತ್ರ

ಅಮೆರಿಕಾ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ಜನವರಿ 2008ರಲ್ಲಿ ಚುನಾವಣೆ ನಡೆಸಲಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ಮುಂದುವರೆದಿವೆ.

***

ಗಾಂಧಿಗೆ ಸ್ನಾನ

ಗಾಂಧೀಜಿ ಅವರಿಗೆ ಬಿಜೆಪಿ ಗೌರವ ನೀಡುವುದಿಲ್ಲ. ಈ ಪಕ್ಷ ಗಾಂಧೀಜಿ ಪ್ರತಿಮೆ ಬಳಿ ಧರಣಿ ನಡೆಸಿ, ಗಾಂಧೀಜಿಗೆ ಅಪಚಾರವೆಸಗಿದೆ ಎಂದು ದೂರಿರುವ ಬೆಂಗಳೂರಿನ ಯುವ ಕಾಂಗ್ರೆಸ್, ಇಂದು(ನ.06) ಗಾಂಧಿ ಪ್ರತಿಮೆಯನ್ನು ತೊಳೆದು ಶುಚಿಗೊಳಿಸಿತು. ಅನೇಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+