ಬಂದಿದ್ದು ಸುಳ್ಳುಪರೀಕ್ಷೆಗೆ; ಕಂಬಿಕಿತ್ತದ್ದು ಸುಳ್ಳಿನಿಂದಲೇ..
ಬೆಂಗಳೂರು, ನ.06 : ಇವ ಹೇಳೋದು ಸುಳ್ಳೋ, ಸತ್ಯವೋ ಎಂಬುದನ್ನು ಮಂಪರು ಪರೀಕ್ಷೆ ಮುಖಾಂತರ ತಿಳಿಯಲು ದರೋಡೆ ಆರೋಪ ಹೊಂದಿರುವ ವ್ಯಕ್ತಿಯೊಬ್ಬನನ್ನು ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕರೆ ತರಲಾಗಿತ್ತು. ಆತ ಮತ್ತೊಂದು ಸುಳ್ಳು ಹೇಳಿ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ರೆಹಮಾನ್ ಖಾನ್(35)ಪೊಲೀಸರಿಗೆ ಕೈಕೊಟ್ಟಿರುವ ಆರೋಪಿ. ಮಹಾರಾಷ್ಟ್ರದಿಂದ ಈತನನ್ನು ಪೊಲೀಸರು ಮಂಪರು ಪರೀಕ್ಷೆಗಾಗಿ ಕರೆತಂದಿದ್ದರು. ಮೂತ್ರ ವಿಸರ್ಜನೆಯ ನೆಪವೊಡ್ಡಿದ ರೆಹಮಾನ್, ಅಲ್ಲಿಂದ ಕಂಬಿಕಿತ್ತಿದ್ದಾನೆ. ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ 18 ದರೋಡೆ ನಡೆಸಿದ ಆರೋಪ ಈತನ ಮೇಲಿದೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications