ಉಡುಪಿ: ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಚಾರ ಅಸ್ತವ್ಯಸ್ತ
ಉಡುಪಿ, ಅ.30 : ಇಂದು(ಅ.30)ಬೆಳಗ್ಗೆಯಿಂದ ರಾ.ಹೆದ್ದಾರಿ 17ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾ.ಹೆದ್ದಾರಿಯ ಶಿರೂರು ಮತ್ತು ಹೆಜ್ಮಾಡಿ ನಡುವಿನ ರಸ್ತೆಯ ದುರವಸ್ಥೆ ಬಗ್ಗೆ ಬೇಸತ್ತಿರುವ ಸ್ಥಳೀಯರು 24ಗಂಟೆಗಳ ಬಂದ್ ನಡೆಸುತ್ತಿದ್ದಾರೆ.
ಬೆಳಗ್ಗೆ 7ಗಂಟೆಯಿಂದ ಬಂದ್ ಆರಂಭಗೊಂಡಿದೆ. ಅಗತ್ಯ ಸೇವೆಗಳಿಗೆ ಬಂದ್ ಕಾಲದಲ್ಲೂ ರಿಯಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 17ನ್ನು ಉಳಿಸಿ ಎಂದು ಸ್ಥಳೀಯರು ರಸ್ತೆಗಿಳಿದಿದ್ದಾರೆ. ರಸ್ತೆ ಹದಗೆಟ್ಟಿದ್ದು, ಕೇಂದ್ರ ಸರ್ಕಾರ ರಿಪೇರಿ ಕಾರ್ಯಗಳನ್ನು ನಿರ್ಲಕ್ಷ್ಯ ಮಾಡಿದೆ. ಈ ಬಗ್ಗೆ ಸಾರ್ವಜನಿಕರ ಮನವಿಗಳನ್ನು ಅದು ಗಾಳಿಗೆ ತೂರಿದೆ ಎಂದು ಬಂದ್ ನಿರತರು ದೂರಿದರು. ಕುಂದಾಪುರ, ಉಡುಪಿ, ಮಂಗಳೂರು ನಡುವಿನ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕೆನರಾ ಬಸ್ ನಿರ್ವಹಣಾ ಸಂಘ, ಬಂದ್ ಬೆಂಬಲಿಸಿ ಸೇವೆ ನಿಲ್ಲಿಸಿದೆ.
ಯುವಕರು ರಾ.ಹೆದ್ದಾರಿ 17ರಲ್ಲಿ ವಾಲಿಬಾಲ್, ಕ್ರಿಕೆಟ್, ಕಬಡ್ಡಿ ಆಡುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಮೇಲೆ ಕುಳಿತು ಭಜನೆ ಹಾಡುತ್ತಿದ್ದಾರೆ. ಬಂದ್ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್ಐ)












Click it and Unblock the Notifications