ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ ಬರುತ್ತಿದೆ; ಕರಕುಶಲ ವಸ್ತುಗಳು ಕರೆಯುತ್ತಿವೆ!

By Staff
|
Google Oneindia Kannada News

ಬೆಂಗಳೂರು, ಅ. 30 : ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಈ ಬಾರಿ ಗುಡಿ ಮತ್ತು ಟ್ರೈಬ್ಸ್ ಇಂಡಿಯಾ(Project of TRIFED, Minister of Tribal affairs, Govt. of India) ಜಂಟಿಯಾಗಿ "ಟ್ರೈಬಲ್ ಕ್ರ್ಯಾಫ್ಟ್ಸ್ ಆಫ್ ಇಂಡಿಯ" ಎಂಬ ಪ್ರದರ್ಶನ ಮತ್ತು ಮಾರಾಟವನ್ನು ನಗರದಲ್ಲಿ ಏರ್ಪಡಿಸಿದೆ.

ಅ.28ರಿಂದ ನ.12ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ಆಯೋಜಿಸಲಾಗಿದೆ. ವಿಶಿಷ್ಟವಾದ ದೀಪಾವಳಿ ಹಣತೆಗಳು, ಮಾಹೇಶ್ವರಿ ಸೀರೆಗಳು, ಲೋಹದ ಕರಕುಶಲ ವಸ್ತುಗಳು, ಉತ್ತರ ಭಾರತದ ಬಟ್ಟೆಗಳು ಮುಂತಾದ ಕಲಾಕೃತಿಗಳು ಇಲ್ಲಿ ದೊರೆಯುತ್ತವೆ.

ಭಾರತದ ಜಾನಪದ ಮತ್ತು ಆದಿವಾಸಿಗಳ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಮಧ್ಯ ಪ್ರದೇಶದ ಪ್ರಖ್ಯಾತ ಬಸ್ತಾರ್ ಲೋಹದಿಂದ ಮಾಡಿದ ಕುಸುರಿ ವಸ್ತುಗಳು, ರಾಜಸ್ತಾನದ ಸೂಕ್ಷ್ಮ ಕುಸುರಿ ವಸ್ತುಗಳು (miniature), ಕೇರಳದ ಟೆರ್ರಕೊಟ ಕಲಾತ್ಮಕ ವಸ್ತುಗಳು , ಆಂಧ್ರ ಪ್ರದೇಶದ ಚರ್ಮದ ಬೊಂಬೆಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಹ್ಯಾಂಡ್ ಲೂಮ್ ವಸ್ತ್ರಗಳು , ವಿಶೇಷವಾದ ಒಡವೆಗಳು , ಪ್ರಾಚೀನ ವಸ್ತುಗಳು , ಮನೆಯ ಶೋಭೆ ಹೆಚ್ಚಿಸುವ ಪುರಾತನ ಕರಿಮರದ ಕಂಬಗಳು ಮತ್ತು ನಮ್ಮ ರಾಜ್ಯದ ಮೈಸೂರು ಶೈಲಿಯ ಮರದ ಕೆತ್ತನೆಗಳು, ಚನ್ನಪಟ್ಟಣದ ಬೊಂಬೆಗಳೂ ಸಹಾ ಇಲ್ಲುಂಟು.

ಗ್ರಾಹಕರು ಈ ಪ್ರದರ್ಶನಕ್ಕೆ ಭೇಟಿ ನೀಡಿ, ನಮ್ಮ ದೇಶದ ಜಾನಪದ ಮತ್ತು ಆದಿವಾಸಿ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಟ್ರೈಬ್ಸ್ ಇಂಡಿಯಾ ಪತ್ರಿಕಾ ಪ್ರಕಟಣೆ ತಿಳಿಸಿದೆ. ಸ್ಥಳ : ಗುಡಿ, ಕೆ.ಆರ್.ರಸ್ತೆ, ಬೆಂಗಳೂರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X