ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕರ್ನಾಟಕ : ಮಂಗಳವಾರದ ಸುದ್ದಿ ವಿಶೇಷಗಳು

By Staff
|
Google Oneindia Kannada News

ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಗಣ್ಯರಿಗೆ,2007ರ ರಾಜ್ಯ ಪ್ರಶಸ್ತಿಯನ್ನು ನವೆಂಬರ್ 1ರಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಪ್ರದಾನ ಮಾಡುವರು. ಪಾರ್ವತಮ್ಮ ರಾಜ್ ಕುಮಾರ್, ಅನಂತನಾಗ್ ಸೇರಿದಂತೆ 51ಗಣ್ಯರು ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಕೃಷ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಕಾರ್ಯದರ್ಶಿ ಪಿ.ಬಿ. ಮಹಿಷಿ ಅವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು. ಮಾನ್ಯತೆ ಪಡೆದ ಮಾಧ್ಯಮ ಪ್ರತಿನಿಧಿಗಳು, ಸುದ್ದಿ ಛಾಯಾಗ್ರಾಹಕರು ಹಾಗೂ ವೀಡಿಯೋಗ್ರಾಹಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

***

ರಾಜ್ಯಪಾಲರ ಸಲಹೆಗಾರರು

ರಾಜ್ಯಪಾಲ ರಾಮೇಶ್ವರ ಠಾಕೂರ್ ಸಲಹೆಗಾರರಾಗಿ ಮೂವರು ಕಾರ್ಯದರ್ಶಿಗಳು ನೇಮಕಗೊಂಡಿದ್ದು, ಅವರಿಗೆ ಕೊಠಡಿ ಹಾಗೂ ದೂರವಾಣಿ ಸಂಖ್ಯೆಗಳ ನೀಡಲಾಗಿದೆ. ರಾಜ್ಯಪಾಲರ ಸಲಹೆಗಾರರಿಗೆ ವಿಧಾನಸೌಧ 3ನೇ ಮಹಡಿಯಲ್ಲಿ ಕೊಠಡಿಗಳನ್ನು ಹಾಗೂ ದೂರವಾಣಿಗಳನ್ನು ಒದಗಿಸಲಾಗಿದೆ. ವಿವರ :

ಪಿ. ಪಿ. ಪ್ರಭು: ಕೊಠಡಿ ಸಂಖ್ಯೆ; 316, 316(ಎ),ನೇರ ದೂರವಾಣಿ ಸಂಖ್ಯೆ 22251798
ಎಸ್. ಕೃಷ್ಣಕುಮಾರ್ : ಕೊಠಡಿ ಸಂಖ್ಯೆ; 317, 317(ಎ),ನೇರ ದೂರವಾಣಿ ಸಂಖ್ಯೆ 22253835
ಹೆಚ್. ಕೆ. ತಾರಕನ್ : ಕೊಠಡಿ ಸಂಖ್ಯೆ; 327, 328(ಎ), ನೇರ ದೂರವಾಣಿ ಸಂಖ್ಯೆ 22254429

***

ನವೆಂಬರ್ 16ರಿಂದ ಕೃಷಿ ಮೇಳ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಮೇಳ, ಸಾವಯುವ ಕೃಷಿ ವಸ್ತುಪ್ರದರ್ಶನ ಹಾಗೂ ರಾಷ್ಟ್ರೀಯ ಕೃಷಿ ಯಂತ್ರೋಪಕರಣಗಳ ಪ್ರದರ್ಶನವನ್ನು ನವೆಂಬರ್ 16, 17, 18 ಮತ್ತು 19ರಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದೆ.

***

ಹಂಪಿ ವಿ.ವಿ. ಹಂಗಾಮಿ ಕುಲಪತಿ ನೇಮಕ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಡಾ.ಕೆ.ವಿ.ನಾರಾಯಣ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಡಾ. ಹಿ.ಚಿ. ಬೋರಲಿಂಗಯ್ಯ ಅವರನ್ನು ಹಂಗಾಮಿ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X