ವಾರವಿಡೀ ಸಾಲು ರಜೆಗೆ ಬೊಮ್ಮಾಯಿ ನಿಧನ ನೆಪವಾಯ್ತಲ್ಲ!
ಬೆಂಗಳೂರು, ಅ.11 : ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ನಿಧನದ ಪ್ರಯುಕ್ತ ರಾಜ್ಯಪಾಲರು,ಮೂರು ದಿನಗಳ ಶೋಕಾಚರಣೆ ಮತ್ತು ಗುರುವಾರ(ಅ.11)ರಾಜ್ಯದ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದ್ದಾರೆ.
ಗಣ್ಯರು ಮೃತಪಟ್ಟರೇ ರಜೆ ಸರ್ವೇ ಸಾಮಾನ್ಯ. ಬೊಮ್ಮಾಯಿ ನಿಧನದಿಂದಾಗಿ ಸಾಲು ರಜೆಯೇ ಬಂದಂತಾಗಿದೆ. ಅ.10ರಂದು ಮಹಾಲಯ ಅಮವಾಸೆ ಪ್ರಯುಕ್ತ ಸರ್ಕಾರಿ ರಜೆ ಇತ್ತು. ಇಂದು(ಅ.11) ಬೊಮ್ಮಾಯಿ ನಿಧನದ ಹಿನ್ನೆಲೆ ರಜೆ. ಅ.12 ರಜೆ ಹಾಕಿದರೆ, ರಂಜಾನ್ ಹಿನ್ನೆಲೆಯಲ್ಲಿ ಅ.13ರ ಸರ್ಕಾರಿ ರಜೆಯನ್ನು ಅನುಭವಿಸಬಹುದು. ಅ.14ಭಾನುವಾರ ವಾರದ ರಜೆ. ಹೀಗಾಗಿ ವಾರವಿಡೀ ರಜೆಯ ಮಜಾದಲ್ಲಿದೆ ಕರ್ನಾಟಕ.
ಇಷ್ಟೆಲ್ಲ ಮುಗಿಯಿತು ಎನ್ನುವಾಗಲೇ ನಮ್ಮ ಮುಂದೆ ನಿಂತಿವೆ ಆಯುಧ ಪೂಜೆ ಮತ್ತು ವಿಜಯದಶಮಿ. ಇವು ಕ್ರಮವಾಗಿ ಅ.20ಮತ್ತು 21ರಂದು ಬಂದಿವೆ. ಪುಣ್ಯಕ್ಕೆ ಆ ಎರಡೂ ದಿನಗಳೂ ಶನಿವಾರ ಮತ್ತು ಭಾನುವಾರ ಬಂದಿವೆ. ಎರಡು ರಜೆ ದಿನಗಳು ಕಡಿಮೆಯಾದವು ಎಂದು ಸರ್ಕಾರಿ ನೌಕರರು ಗೊಣಗುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications