ಕ್ರಿಕೆಟ್ ಬೆಟ್ಟಿಂಗ್ ನಮ್ ಬೆಂಗಳೂರಿನಲ್ಲೇನು ಕಡಿಮೆಯಿಲ್ಲ!
ಬೆಂಗಳೂರು, ಅ.06 : ಕ್ರಿಕೆಟ್ ಬೆಟ್ಟಿಂಗ್ ಯಾವ ಮಟ್ಟಕ್ಕೆ ನಡೆಯುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ನಗರದ ಅಪರಾಧ ವಿಭಾಗದ ಪೊಲೀಸರು ಕ್ರಿಕೆಟ್ ಬುಕಿಯೊಬ್ಬನನ್ನು ಬಂಧಿಸಿ, ಅವನಿಂದ 45ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ(ಅ.5) ಹೈದರಾಬಾದ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುವ ಸಂದರ್ಭದಲ್ಲಿ, ಮಧ್ಯಪ್ರದೇಶದ ಇಂದೋರ್ ಮೂಲದ ಕುಶಾಲ್ ಕೊಠಾರಿ ಸಿಕ್ಕಿಬಿದ್ದಿದ್ದಾನೆ. ಈತ ಈಗ ಪೊಲೀಸರ ಅತಿಥಿ. ವಸಂತನಗರದಲ್ಲಿ ಕಳೆದ ಎರಡು ವರ್ಷಗಳಿಂದ ಈತ ವಾಸಿಸುತ್ತಿದ್ದು, ನಗರದ ಪ್ರಮುಖ ಕ್ರಿಕೆಟ್ ಬುಕಿ ಎಂದು ಪೊಲೀಸರು ಹೇಳಿದ್ದಾರೆ.
ಈತನ ಮನೆಯಿಂದ 9 ಮೊಬೈಲ್ , ಕಂಪ್ಯೂಟರ್, ಲ್ಯಾಪ್ ಟಾಪ್, ಎರಡು ಟೀವಿ ಸೇರಿದಂತೆ ಲಕ್ಷಾಂತರ ರೂ.ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಅನೇಕ ಕ್ರಿಕೆಟ್ ಬುಕಿಗಳು ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ-
ಭಾರತ ಮತ್ತು ಆಸ್ಟ್ರೇಲಿಯಾ ಏಕದಿನ ಪಂದ್ಯಗಳ ವೇಳಾಪಟ್ಟಿ
ಹೈದರಾಬಾದ್ನಲ್ಲೂ ಮುಗ್ಗರಿಸಿದ ಭಾರತ ಕ್ರಿಕೆಟ್ ತಂಡ


Click it and Unblock the Notifications
