ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಿಕ್ ಮಾಡೋ ಆಟೋ ಚಾಲಕರನ್ನು ಸುಮ್ಮನೇ ಬಿಡಬೇಡಿ!

By Staff
|
Google Oneindia Kannada News

Arrogant, cheating auto driver? Call...
ಆಟೋ ಚಾಲಕರ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು, ನಾವು ಈ ವರದಿಯಲ್ಲಿ ಹೇಳುವ ದೂರವಾಣಿ ಸಂಖ್ಯೆಗಳನ್ನು ಗುರ್ತು ಹಾಕಿಕೊಳ್ಳಿ. ನಿಮ್ಮ ಮೊಬೈಲ್ ನಲ್ಲಿ ಫೀಡ್ ಮಾಡಿಕೊಳ್ಳಿ. ನಿಮ್ಮ ಪರ್ಸಲ್ಲಿ ಇಟ್ಟುಕೊಳ್ಳಿ. ನಿಮ್ಮ ಗೆಳೆಯರಿಗೂ ಈ ಸಂಖ್ಯೆಗಳ ನೀಡೋದನ್ನು ಮರೆಯಬೇಡಿ. ಸುಖಕರ ಆಟೋ ಪ್ರವಾಸ ಎಲ್ಲರಿಗೂ ಸಿಗಬೇಕಾದರೆ, ಆಟೋರಿಕ್ಷಾ ಬಳಸುವ ಗ್ರಾಹಕರೆಲ್ಲ ಮೊದಲು ಒಂದಾಗಬೇಕು.

* ದಟ್ಸ್ ಕನ್ನಡ ಕೇರ್ಸ್‌ ಫಾರ್ ಯು

ಆಫೀಸಿನಿಂದ ಹೊರಬಂದರೆ ಧೋ ಎಂದು ಸುರಿಯುತ್ತಿರುವ ಮಳೆ. ಬೇಗ ಮನೆ ತಲುಪೋಣವೆಂದು ಬಸ್ಸಿಗಾಗಿ ಕಾದಿದ್ದೆ ಆಯ್ತು. ಜರ್ರನೆ ಸುರಿಯುತ್ತಿರುವ ಮಳೆಯಲ್ಲಿ ರೊಯ್ಯನೆ ಹೋಗುತ್ತಿದ್ದ ಆಟೋವನ್ನು ಕೈ ಸನ್ನೆ ಮಾಡಿ ನಿಲ್ಲಿಸಿ, 'ಯಶವಂತಪುರ ಬರ್ತೀಯೇನಪ್ಪ' ಎಂದರೆ ಆಟೋ ಚಾಲಕ, ನಿಮ್ಮ ಅಸ್ತಿತ್ವವನ್ನೇ ನಿರಾಕರಿಸುವಂತೆ, ಮುಂದೆ ಹೋಗುತ್ತಾನೆ.

ರಾತ್ರಿ 9.30ರ ನಂತರ ವನ್ ಅಂಡ್ ಆಫ್ ಕೇಳುವುದು, ವೆಯ್ಟಿಂಗ್ ಚಾರ್ಜ್ ಕೇಳುವುದು, ಮಳೆ ಬೀಳುತ್ತಿದ್ದರೆ ಹೆಚ್ಚಿಗೆ ಮೀಟರ್ ಚಾರ್ಜ್ ಕೀಳುವುದು, ಕೆಲವು ಆಟೋಗಳಲ್ಲಿ ಡಿಸ್‍ಪ್ಲೆ ಕಾರ್ಡ್‍‍ನ್ನು ಪ್ರದರ್ಶಿಸದೆ ಇರುವುದು,ಪಾನ್‌ ಪರಾಗ್‌ ಜಗಿದು ಉಗಿಯುವುದು, ಕಿವಿ ತೂತಾಗುವಂತೆ ಸ್ಪೀಕರ್ ಹಾಕಿ ಪ್ರಯಾಣಿಕರ ತಾಳ್ಮೆ ಪರೀಕ್ಷಿಸುವುದು ನಗರದ ಜನತೆಗೆ ತಲೆನೋವಿನ ವಿಚಾರಗಳಾಗಿ ಕಾಡುತ್ತಿವೆ.

ಆಟೋ ಚಾಲಕರು ಪ್ರಯಾಣಿಕರನ್ನು ಸುಲಿಯುವ ವಿಧಾನಗಳು ಒಂದೆರಡಲ್ಲ. ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಪಿಕ್ ಸಮಸ್ಯೆ ಒಂದೆಡೆಯಾದರೆ, ಆ ಟ್ರಾಫಿಕ್ ನಲ್ಲಿ ಒದ್ದಾಡುತ್ತಾ ಆಟೋನಲ್ಲಿ ಪ್ರಯಾಣಿಸಿ ಅವನು ಕೇಳಿದಷ್ಟು ಕೊಡುವ ಪರಿಪಾಠ ಮಾಮೂಲಾಗಿದೆ.

ಬೆಂಗಳೂರಿನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಆಟೋಗಳಿವೆ. ನಯ ವಿನಯ, ಪ್ರಯಾಣಿಕರಿಗೆ ತೊಂದರೆಯಾಗದಂತೆ ವರ್ತಿಸುವವರ ಸಂಖ್ಯೆ ತೀರ ಕಡಿಮೆ. ಎಷ್ಟೋ ಆಟೋದವರು ಇನ್ನೂ ಇಲೆಕ್ಟ್ರಾನಿಕ್‌ ಮೀಟರ್ ಅಳವಡಿಸಿಲ್ಲ. ಹಳೆಯ ಮೀಟರ್ ಗಳು ಶೇಕಡಾ 20 ರಿಂದ 25ರಷ್ಟು ಹೆಚ್ಚಿಗೆ ತೋರಿಸುತ್ತದೆ. 10 ಪರ್ಸೆಂಟ್‌ ಮೀಟರ್ ಜಂಪಿಂಗ್‌ ನ್ಯಾಯವಾದದ್ದು ಎಂದು ಬಹಿರಂಗವಾಗಿಯೇ ಸಾರುವ ಚಾಲಕರೂ ಇದ್ದಾರೆ!

ಇನ್ನು ಪ್ರತಿಷ್ಠಿತ ಮಾರಾಟ ಮಳಿಗೆಗಳಾದ ಗರುಡ ಮಾಲ್, ಫೋರಂ, ಸೆಂಟ್ರಲ್, ಲೈಪ್‍ಸ್ಟೈಲ್‍ನಂತಹ ಸ್ಥಳಗಳಿಂದ ಪ್ರಯಾಣಿಸಬೇಕೆಂದರೆ ನೇರವಾಗಿ ಜೇಬಿಗೆ ಕತ್ತರಿ ಬಿದ್ದಂತೆ. ಈ ಎಲ್ಲ ಸಮಸ್ಯೆಗಳನ್ನು ಪ್ರತಿನಿತ್ಯ ಅನುಭವಿಸುತ್ತಾ, ಆಟೋದವರನ್ನು ಶಪಿಸುತ್ತಾ ಕೂರುವುದೇ ನಮ್ ಹಣೆಬರಹ ಎಂದು ಕೊಂಡಿದ್ದೀರಾ? ಬೆಂಗಳೂರು ಪೊಲೀಸ್‌ ತೆರೆದಿರುವ ಎರಡು ದೂರವಾಣಿ ಸಂಖ್ಯೆಗಳು ನಿಮ್ಮ ನೆರವಿಗೆ ಬರಲಿ. ಯಾವನಾರಾ ಡ್ರೈವರ್ ಗಾಂಚಲಿ ಮಾಡಿದರೆ ಮುಲಾಜಿಲ್ಲದೆ ಈ ನಂಬರುಗಳಿಗೆ ಫೋನ್‌ ಮಾಡಿ.

ಇನ್ನು ಮುಂದೆ ಆಟೋದವನನ್ನು ಶಪಿಸುತ್ತಾ ಕೂರದೆ ಈ ನಂಬರುಗಳಿಗೆ ಫೋನ್ ಮಾಡಿ : 080-2226 0554 / 080-2220 7750. ನಿಮ್ಮ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗುತ್ತದೆ. ತೊಂದರೆಗೊಳಗಾದಾಗ ಈ ನಂಬರಿಗೆ ಫೊನ್ ಮಾಡಿ ಆಟೋ ಸಂಖ್ಯೆಯನ್ನು ತಿಳಿಸಿ. ಹಾಗೆಯೇ ಆಟೋದ ಚಾಲನ ಪರವಾನಿಗೆ ಸಂಖ್ಯೆಯನ್ನೂ ನೋಟ್ ಮಾಡಿಕೊಳ್ಳಿ.

ಆಟೋದಲ್ಲಿ ಬೆಲೆಬಾಳುವ ವಸ್ತುಗಳನ್ನೇನಾದರು ಕಳೆದುಕೊಂಡಾಗ ಕೂಡಲೆ ಮೇಲಿನ ನಂಬರಿಗೆ ಫೋನ್ ಮಾಡಿ ತಿಳಿಸಿ. ಆದಷ್ಟು ಜಾಗ್ರತೆ ವಹಿಸಿ. ಕೆಲವು ಆಟೋಗಳಲ್ಲಿ ಮೀಟರ್ ದುರ್ಬಳಕೆಯಿಂದ ಹೆಚ್ಚಿಗೆ ತೆರಬೇಕಾಗುತ್ತದೆ ಅಂತಹ ಸಂದರ್ಭಗಳಲ್ಲಿ ಸನಿಹದ ಪೋಲೀಸ್ ಠಾಣೆಗೆ ತಿಳಿಸಿ.

ನಿಮ್ಮ ಗಮನಕ್ಕೆ :
ಆಟೋ ಕಿರಿಕ್‌ ಇನ್ನಿಲ್ಲ! ಸುಖ ಪಯಣಕ್ಕಾಗಿ ಈಜಿ ಆಟೋ!
ಇಂಥ ಆಟೋ ಡ್ರೈವರ್ ಗಳಿಂದಲೇ ಚೂರು ಮಳೆ-ಬೆಳೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X