ಫೋನ್ ಮಾಡಿ ತಲೆ ತಿನ್ತಾರಾ? ಇನ್ನು ಯೋಚಿಸಬೇಡಿ!
ಬೆಂಗಳೂರು, ಜುಲೈ 28 : ನಿಮಗೆ ಆ ಲೋನ್ ಬೇಕಾ? ಈ ಲೋನ್ ಬೇಕಾ? ವಿಮೆ ಮಾಡಿಸಿ? ಕ್ರೆಡಿಟ್ ಕಾರ್ಡ್ ಬೇಕಾ? ಅದು ಬೇಕಾ? ಇದು ಬೇಕಾ? -ಇಂತಹ ಅನೇಕ ಕರೆಗಳು ದೂರವಾಣಿಯಲ್ಲಿ ಬರುತ್ತಿರುತ್ತವೆ.
ಬೇಡವೆಂದರೂ ಬಿಡುವುದಿಲ್ಲ, ಯಾಕೆ ಬೇಡ? ಎನ್ನುವ ಮರು ಪ್ರಶ್ನೆ. ತಲೆ ತಿಂದು ಮೆದುಳಿಗೆ ಕೈಹಾಕುವ ಟೆಲಿ ಮಾರ್ಕೆಟಿಂಗ್ ಕಂಪನಿಗಳ ಕಿರಿಕಿರಿ, ಸೆಪ್ಟೆಂಬರ್ 5ರಿಂದ ತಪ್ಪುವ ಸಾಧ್ಯತೆಗಳಿವೆ.
ಕೇಂದ್ರ ಸರ್ಕಾರದ ಯೋಜನೆ ಪ್ರಕಾರ, ಗ್ರಾಹಕರು ಅನಗತ್ಯ ಕಿರಿಕಿರಿ ಕರೆಗಳ ತಪ್ಪಿಸುವಂತೆ ಎನ್ ಡಿಸಿಆರ್(ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟರ್)ನಲ್ಲಿ ತಮ್ಮ ಹೆಸರು ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ದಾಖಲಿಸಬೇಕು.
ರಿಜಿಸ್ಟರ್ ಆದ ಮೊಬೈಲ್ ಗಳಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಕರೆ ಮಾಡುವಂತಿಲ್ಲ. ಕರೆ ಮಾಡಿದರೆ 1000 ರೂಪಾಯಿ ದಂಡ ಕಟ್ಟ ಬೇಕಾಗುತ್ತದೆ.
ಈ ಯೋಜನೆಯನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications