ವಿಧಾನಸಭೆಯಲ್ಲಿ ಲೋಕಾಯುಕ್ತರ ವಿರುದ್ಧ ಟೀಕೆಗಳ ಮಳೆ!
ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ವಿಧಾನಸಭೆಯಲ್ಲಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಾಯುಕ್ತರ ಧೋರಣೆಯಿಂದ ಅಷ್ಟೋ ಇಷ್ಟೋ ಸಭ್ಯರಾಗಿ ಉಳಿದಿದ್ದ ಕೆಲ ಶಾಸಕರು ಸಹಾ, ಮುಜುಗರಕ್ಕೆ ಸಿಲುಕಿದ್ದಾರೆ.ಆಸ್ತಿ ವಿವರ ಕೇಳುವುದು ತಪ್ಪಲ್ಲ. ಈ ನೆಪದಲ್ಲಿ ಶಾಸಕರನ್ನೆಲ್ಲ ಕಳ್ಳರೆಂದು ಬಿಂಬಿಸಲು ಲೋಕಾಯುಕ್ತರು ಪ್ರಯತ್ನಿಸಿದ್ದಾರೆ ಎಂದು ಶಾಸಕರ ರಮೇಶ್ ಕುಮಾರ್ ದೂರಿದರು.
ಸದ್ಯ, ಲೋಕಾಯುಕ್ತರು ನಮ್ಮ ಮನೆಯಲ್ಲಿರುವ ದನ ಕರುಗಳೆಷ್ಟು? ಅವು ಹಾಕುವ ಲದ್ದಿ ಎಷ್ಟು? ಅದರ ಬೆಲೆ ಎಷ್ಟು? ಎಂದು ಕೇಳಿಲ್ಲ. ಶಾಸಕರಿಗೆ ನಡತೆ ಪ್ರಮಾಣ ಪತ್ರ ನೀಡಲು ಲೋಕಾಯುಕ್ತರು ಹೊರಟಿದ್ದಾರೆ ಎಂದು ರಮೇಶ್ ಕುಮಾರ್ ಹೇಳಿದರು. ಅವರ ಮಾತಿಗೆ ಸಂಯುಕ್ತ ಜನತಾದಳದ ಶಾಸಕ ಜೆ.ಸಿ.ಮಾಧುಸ್ವಾಮಿ ಧ್ವನಿ ಸೇರಿಸಿದರು.
***
ಅನಂತಕುಮಾರ್ ಘೋಷಣೆ
ಒಪ್ಪಂದದಂತೆ ಅಧಿಕಾರ ಹಸ್ತಾಂತರದ ನಂತರ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿದ್ದಾರೆ.












Click it and Unblock the Notifications