ಖರ್ಗೆ ಕುರ್ಚಿ ಮೇಲೆ ಶ್ರೀಕಂಠದತ್ತ ಒಡೆಯರ್ ಕಣ್ಣು?!
ಮೈಸೂರು, ಜುಲೈ 18 : ಹೊಸ ನಾಯಕತ್ವದಲ್ಲಿ ಕಾಂಗ್ರೆಸ್ ಸಂಘಟಿಸಲು ಹೈಕಮಾಂಡ್ ಚಿಂತನೆ ನಡೆಸಿದೆ. ಈಹೊತ್ತಿನಲ್ಲಿ ಮೈಸೂರು ಅರಸು ಮನೆತನದ ಶ್ರೀಕಂಠದತ್ತ ಒಡೆಯರ್, ನನಗೊಂದು ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಸಂದೇಶ ರವಾನಿಸಿದ್ದಾರೆ.
ರಾಷ್ಟ್ರ ರಾಜಕಾರಣ ಇನ್ನು ಸಾಕು. ರಾಜ್ಯದ ವಿಧಾನಸಭೆ ಪ್ರವೇಶಿಸುವ ಮೂಲಕ, ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ. ವರಿಷ್ಠರು ಬಯಸಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಹೊಣೆ ಹೊರಲು ನಾನು ಸಿದ್ಧ ಎಂದು ಶ್ರೀಕಂಠದತ್ತ ಒಡೆಯರು ಹೇಳಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ ನಾಲ್ಕು ಸಲ ಚುನಾಯಿತರಾಗಿರುವ ಒಡೆಯರ್, ರಾಜ್ಯ ರಾಜಕಾರಣಕ್ಕೆ ಮರಳಲು ಆಸಕ್ತರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ ಮತ್ತಿತರ ನಾಯಕರಿಗೆ, ಈ ಬೆಳವಣಿಗೆ ಇರುಸುಮುರುಸು ತಂದಿದೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications