ಮುಯ್ಯಿಗೆ ಮುಯ್ಯಿ!:ಆಗುಂಬೆ ಬಳಿ ಬಿತ್ತು ಎಎಸ್ಐ ಹೆಣ!
ಶಿವಮೊಗ್ಗ, ಜುಲೈ 18: ಹಿಂಸಾ ಮಾರ್ಗ ತುಳಿದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹತ್ಯೆಗೆ ಕಾರಣರಾದ ನಕ್ಸಲರು, ತಕ್ಕ ದಂಡವನ್ನು ತೆರಬೇಕಾಗುತ್ತದೆ. ನಕ್ಸಲರ ಮಟ್ಟ ಹಾಕಲು, ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ರಾಜ್ಯ ಸರ್ಕಾರ ಬುಧವಾರ ಹೇಳಿದೆ.
ಹಿನ್ನೆಲೆ : ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎಂಬಂತೆ ನಕ್ಸಲರ ಬಂದೂಕುಗಳು ಆಗುಂಬೆ ಸಮೀಪದ ಕಾಡಿನಲ್ಲಿ ಅಬ್ಬರಿಸಿವೆ. ಪೊಲೀಸರು ಮತ್ತು ನಕ್ಸಲರ ಗುಂಡಿನ ಚಕಮಕಿಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್(55) ಬಲಿಯಾಗಿದ್ದಾರೆ. ಆಗುಂಬೆ ಬಳಿಯ ಹುಲಗಾರು ಬೈಲು ಕಾಡಿನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವತಿಗೆ ಗುಂಡು ತಗಲಿದೆ ಎನ್ನಲಾಗಿದೆ. ಜು.10ರ ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್ ಗೌತಮ್ಮ ಸೇರಿದಂತೆ ನಾಲ್ವರು ಗ್ರಾಮಸ್ಥರು ಮೃತಪಟ್ಟಿದ್ದರು. ಈ ಘಟನೆ ನಡೆದ ಮೇಲೆ, ನಕ್ಸಲರು ಸಿಡಿಮಿಡಿಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications