ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾಂ ಅಲ್ಲ ಬೆಳಗಾವಿಯೇ ಆಗಬೇಕು : ಕರವೇ ಪಟ್ಟು

By Staff
|
Google Oneindia Kannada News

ಬೆಂಗಳೂರು, ಜುಲೈ 14 : ಬೆಳಗಾವಿ ಹೆಸರನ್ನು ಬೆಳಗಾಂ ಎಂದೇ ಇರಿಸಬೇಕೆಂದು ಮಹಾರಾಷ್ಟ್ರ ಗಡಿ ತಜ್ಞರ ಸಮಿತಿ ನೀಡಿರುವ ಹೇಳಿಕೆಯನ್ನು ಪ್ರತಿಭಟಿಸಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರ ಇಲ್ಲಿ ಧರಣಿ ನಡೆಸಿತು.

ಎಂ.ಜಿ. ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಎದಿರು ನೂರಾರು ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕದ ನೆಲ, ಜಲ, ಜನರ ಸ್ವಂತಿಕೆ ಉಳಿಯಬೇಕೆಂದರೆ ಬೆಳಗಾಂನ್ನು ಬೆಳಗಾವಿಯೆಂದೇ ಬದಲಾಯಿಸಬೇಕು. ಇದಕ್ಕಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದು ವೇದಿಕೆ ಕಾರ್ಯಕರ್ತರು ಒಕ್ಕೊರಲಿನಿಂದ ಕೂಗಿದರು.

***

ಇನ್ಫೋಸಿಸ್ ನಾರಾಯಣಮೂರ್ತಿಗೆ ಉಪರಾಷ್ಟ್ರಪತಿ ಸ್ಥಾನ?

ಈ ಮುಂಚೆ ರಾಷ್ಟ್ರಪತಿ ಸ್ಥಾನಕ್ಕೆ, ಈಗ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಹೆಸರು ಕೇಳಿ ಬರುತ್ತಿದೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಾರಾಯಣಮೂರ್ತಿ, ನನ್ನಲ್ಲಿ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಯುಪಿಎ ಮತ್ತು ಎನ್‌ಡಿಎ ಕಾರ್ಯವೈಖರಿ ಬಗೆಗಿನ ಪ್ರಶ್ನೆಗೆ, ಈ ಕುರಿತು ಪ್ರತಿಕ್ರಿಯಿಸಲು ನಾನು ಸೂಕ್ತ ವ್ಯಕ್ತಿಯಲ್ಲ ಎಂದು ನಾರಾಯಣ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

***

ಅಮೆರಿಕಾ ಸೆನೆಟ್‌ನಲ್ಲಿ ಹಿಂದೂ ಪ್ರಾರ್ಥನೆ!

ಅಮೆರಿಕಾ ಸೆನೆಟ್‌ನಲ್ಲಿ ವೇದ ಮಂತ್ರಗಳು ಮೊಳಗಿವೆ. 218ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಿಂದೂ ಪ್ರಾರ್ಥನೆಯೊಂದಿಗೆ, ಅಧಿವೇಶನಕ್ಕೆ ಚಾಲನೆ ನೀಡಲಾಗಿದೆ.

ಸಭಿಕರ ಗ್ಯಾಲರಿಯಲ್ಲಿ ಕುಳಿತಿದ್ದ ಮೂವರು ಪ್ರಾರ್ಥನೆಗೆ ವಿರೋಧ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಪೊಲೀಸರು ಬಂಧಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X