ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

07,07,07,07,07,07:ಇದು ಈ ಶನಿವಾರದ ವಿಶೇಷ!

By Staff
|
Google Oneindia Kannada News

ಶನಿವಾರ(ಜು.7)ಒಂದು ನಂಬರ್ ಮ್ಯಾಜಿಕ್ ನಡೆಯಲಿದೆ! ಶನಿವಾರ(7ನೇ ತಾರೀಖು, 7ನೇ ತಿಂಗಳು, 2007ನೇ ವರ್ಷ) ಬೆಳಗ್ಗೆ ಏಳು ಗಂಟೆ ಏಳು ನಿಮಿಷ, ಏಳು ಸೆಕೆಂಡಿಗೆ ಈ ಚಮತ್ಕಾರವನ್ನು ಕಾಣಬಹುದು! ಬೆರಗಾಗಬಹುದು!

ಅಂದರೆ ಮೇಲೆ ಹೇಳಿದಂತೆ ತಾರೀಖು, ದಿನಾಂಕ, ವರ್ಷ, ಸಮಯ(7ಗಂಟೆ, 7ನಿಮಿಷ, ಏಳು ಸೆಕೆಂಡ್) -ಇವೆಲ್ಲವನ್ನೂ ಒಂದೆಡೆ ಬರೆದಾಗ; 07,07,07,07,07,07 ಆಗುತ್ತದೆ! ಎಂಥಾ ಮಜಾ ಅಲ್ವಾ?

* * *

ಕ್ರೀಡಾಪಟುಗಳಿಗೆ ಬಹುಮಾನ

ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ 2006,07ನೇ ಸಾಲಿನಲ್ಲಿ ನಡೆಸಲಾದ ರಾಜ್ಯಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಹಾಗೂ ಎಸ್‌ಜಿಎಫ್‌ಐನ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಶಾಲಾ ಕ್ರೀಡಾಪಟುಗಳಿಗೆ, ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ನಿಧಿಯಿಂದ ಮತ್ತು ರಾಜ್ಯ ವಿದ್ಯಾರ್ಥಿ ಕ್ರೀಡಾ ನಿಧಿಯಿಂದ ನಗದು ಬಹುಮಾನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಕ್ರೀಡಾಪಟುಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ಇವರಿಂದ ಪಡೆದು ಜುಲೈ 25 ರೊಳಗೆ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

* * *

ಕಳ್ಳಭಟ್ಟಿ ತಯಾರಿಕೆ : ಮಾಹಿತಿಗೆ ಮನವಿ

ರಾಜ್ಯದ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲಿ ಕಳ್ಳಭಟ್ಟಿ ಸಾರಾಯಿ, ಅಕ್ರಮ ಮದ್ಯ,, ಗಾಂಜಾ ಮುಂತಾದ ಅಬಕಾರಿ ವಸ್ತುಗಳನ್ನು ಅಕ್ರಮವಾಗಿ ಉತ್ಪಾದಿಸುವುದು, ಹೊಂದುವುದು, ಮಾರಾಟ ಮತ್ತು ಸಾಗಾಣಿಕೆ ಮಾಡುವುದು ಅಪರಾಧ. ಈ ಬಗ್ಗೆ ನಿಮಗೆ ತಿಳಿದುಬಂದಲ್ಲಿ ಮಾಹಿತಿ ನೀಡಬೇಕೆಂದು ಪ್ರಕಟಣೆ ಕೋರಿದೆ.

ಅಬಕಾರಿ ಜಂಟಿ ಆಯುಕ್ತರು, ರಾಜ್ಯ ವಿಚಕ್ಷಣ ದಳ, ಹೊಸ ಸಾರ್ವಜನಿಕ ಕಚೇರಿಗಳ ಕಟ್ಟಡ, ನೃಪತುಂಗ ರಸ್ತೆ, ಕೆ.ಆರ್. ವೃತ್ತ, ಬೆಂಗಳೂರು ಕಛೇರಿಯ ದೂರವಾಣಿ ಸಂಖ್ಯೆ 22278826, ಫ್ಯಾಕ್ಸ್ 22210285 ಮುಖಾಂತರ ಅಥವಾ ಖುದ್ದಾಗಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲು ಕೋರಲಾಗಿದೆ.

* * *

ಸಾರಿಗೆ ಅದಾಲತ್

ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಲುವಾಗಿ ಜುಲೈ 10ರ ಮಧ್ಯಾಹ್ 3ಗಂಟೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಬೆಂಗಳೂರು (ದಕ್ಷಿಣ), ಜಯನಗರ, ಬೆಂಗಳೂರು ಇಲ್ಲಿ ಸಾರಿಗೆ ಅದಾಲತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* * *

ಗ್ರಾಹಕರ ಅದಾಲತ್

ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ಅನೇಕ ಶಾಸಕರು ಮತ್ತು ಸಚಿವರು ಗಲಿಬಿಲಿಗೊಂಡಿದ್ದಾರೆ.

ಕಾನೂನು ಮಾಪನಶಾಸ್ತ್ರ ಉಪ ನಿಯಂತ್ರಕರ ಕಛೇರಿ, ಬೆಂಗಳೂರು ಜಿಲ್ಲೆ, ಸಂ. 263, 5ನೇ ಬ್ಲಾಕ್, ರಾಜಾಜಿನಗರ ಇಲ್ಲಿ ಜುಲೈ 7ರಂದು ಸಂಜೆ 4.30 ಗಂಟೆಗೆ ಗ್ರಾಹಕರ ಅದಾಲತ್ ಏರ್ಪಡಿಸಲಾಗಿದೆ.

ಬೆಂಗಳೂರು ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಮತ್ತು ಗ್ರಾಹಕರ ಸಂಸ್ಥೆಗಳು ಅದಾಲತ್‌ಗೆ ಹಾಜರಾಗಿ ತೂಕ ಮತ್ತು ಅಳತೆಗೆ ಸಂಬಂಧಪಟ್ಟಂತೆ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

* * *

ಸಹಾಯಧನಕ್ಕೆ ಅರ್ಜಿ ಆಹ್ವಾನ

2006ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಸೃಜನೇತರ ಪ್ರಕಾರಕ್ಕೆ ಸೇರಿದ ಜಾನಪದ, ವೈಜ್ಞಾನಿಕ, ಐತಿಹಾಸಿಕ, ಸಾಂಸ್ಕೃತಿಕ, ಸಂಶೋಧನಾತ್ಮಕ, ಸಮಕಾಲೀನ, ವಿಮರ್ಶಾತ್ಮಕ ಹಾಗೂ ವ್ಯಕ್ತಿ ವಿಶೇಷ ಕುರಿತ ಸಾಹಿತ್ಯದ ಮೌಲ್ಯವುಳ್ಳ ಕನ್ನಡ ಗ್ರಂಥಗಳಿಗೆ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು-2 ಅಥವಾ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ. ಗ್ರಂಥಗಳನ್ನು ಸ್ವೀಕರಿಸಲು ಆಗಸ್ಟ್ 10 ಕೊನೆಯ ದಿನವಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X