ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿರಸಿ ಬಳಿ ಮತಾಂತರ ಪ್ರಕ್ರಿಯೆಗೆ ತಡೆ :ನಾಲ್ವರ ಬಂಧನ

By Staff
|
Google Oneindia Kannada News

ಶಿರಸಿ :ಮುಗ್ಧ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ,ಒಂಬತ್ತು ಜನರ ತಂಡವನ್ನು ಹಿಂದೂ ಜಾಗರಣ ವೇದಿಕೆ ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದೆ.

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹೊಸ ಬಸ್ ನಿಲ್ದಾಣದ ಸಮೀಪವಿರುವ ಗುಡಿಸಲೊಂದರ ಮೇಲೆ ದಾಳಿ ನಡೆಸಿದರು.ಈ ಸಂದರ್ಭದಲ್ಲಿ, ಒಳಗಿದ್ದ ಹಿಂದೂಗಳಿಗೆ ಹಾಗೂ ಕ್ರೈಸ್ತರಿಗೆ ಇಬ್ಬರು ಮಹಿಳೆಯರು ಮತ್ತು ಏಳು ಜನ ಪುರುಷರು ಬೋಧನೆ ಮಾಡುತ್ತಿದ್ದರು. ಕ್ರೈಸ್ತ ಧರ್ಮದ ಹಾಡುಗಳನ್ನೊಳಗೊಂಡ ಉಜ್ಜೀವನ ಗೀತೆಗಳು ಎಂಬ ಪುಸ್ತಕ ಅಲ್ಲಿ ನೆರೆದವರ ಕೈಯಲ್ಲಿತ್ತು ಎನ್ನಲಾಗಿದೆ.

ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುವ ಎಸ್ತೆಲಾ, ಆಕೆಯ ಗಂಡ ಪಾಲ್ ಸ್ಯಾಮ್ಯುವೆಲ್, ಪ್ರಮೋದ್, ಗಣೇಶ್, ಆಂಟೋನಿ ಜಾನ್ ಅಲ್ಫನ್ಸ್, ಕ್ಸೇವಿಯರ್ ಫರ್ನಾಂಡಿಸ್, ಈರೇಶ್ ಭೋವಿ, ಉಷಾ ಮನೋಹರ್ ನಾಯಕ್ ಪೊಲೀಸರ ವಶದಲ್ಲಿರುವ ವ್ಯಕ್ತಿಗಳು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಮನ್ವಯಾಧಿಕಾರಿ ಕೃಷ್ಣ ಇಸಾಳೆ ಸುದ್ದಿಗಾರರೊಂದಿಗೆ ಮಾತನಾಡಿ, ಲಕ್ಮೀನಾರಾಯಣ ಶೇಟ್ ಎಂಬುವವರ ಗುಡಿಸಲಿನಲ್ಲಿ ಕಳೆದ ಮೂರು ತಿಂಗಳುಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಮತಾಂತರಕಾರರು ಪ್ರತಿ ಭಾನುವಾರ ಬೆಳಗ್ಗೆ 9.30 ಗಂಟೆಯಿಂದ 11.30ಗಂಟೆಯವರೆಗೆ ಪ್ರಾರ್ಥನೆ ಕಲಿಸುತ್ತಾರೆ ಎಂದರು.

ಈ ಜಾಗದಲ್ಲಿ ಪ್ರತಿವಾರ ನಾವು ಹೊಸ ಮುಖಗಳನ್ನೇ ಕಾಣುತ್ತೇವೆ. ಅದೂ ವಿಶೇಷವಾಗಿ ಹಿಂದೂ ಮುಖಗಳು. ಮತಾಂತರಕಾರರು ಸ್ಥಳೀಯರಲ್ಲ , ಅವರು ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾರೆ ಎಂದು ತಿಳಿಸಿದರು.
ನರ್ಸ್ ಎಸ್ತೆಲಾ ಹಿಂದೂ ಜಾಗರಣ ವೇದಿಕೆ ಆರೋಪ ಅಲ್ಲಗಳೆದಿದ್ದಾಳೆ. ಆದರೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಶಾಸಕ ವಿವೇಕಾನಂದ ವೈದ್ಯ ಆಕೆಯನ್ನು ಅಮಾನತುಗೊಳಿಸುವಂತೆ ಸರ್ಕಾರಕ್ಕೆ ಕೋರಲಾಗುವುದು ಎಂದು ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X