ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

83 ವಿಶೇಷ ಆರ್ಥಿಕ ವಲಯಕ್ಕೆ ಅಸ್ತು : ಕೇಂದ್ರ ಸರ್ಕಾರ

By Staff
|
Google Oneindia Kannada News

ನವದೆಹಲಿ: ರಾಜಕೀಯ ಒತ್ತಡದ ನಡುವೆ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ವಲಯ(ಎಸ್‌ಇಜಡ್‌)ಗಳ ಸಂಖ್ಯೆಯನ್ನು 83ಕ್ಕೆ ಸೀಮಿತಗೊಳಿಸಿದೆ. ಈ ನಿರ್ಣಯದ ಪ್ರಕಾರ ಎಸ್‌ಇಜಡ್‌ಗಾಗಿ ಒಟ್ಟು 5 ಸಾವಿರ ಎಕರೆಗಳು ಮಾತ್ರ ಬಳಕೆ ಆಗಲಿದೆ.

ರಾಜ್ಯ ಸರ್ಕಾರಗಳಿಗೆ ಈ ನಿರ್ಣಯದ ಬಗ್ಗೆ ಸೂಚನೆ ನೀಡಲಾಗಿದ್ದು, ಅದರ ಪ್ರಕಾರ ರೈತರಿಂದ ಎಸ್‌ಇಜಡ್‌ಗಾಗಿ ಭೂ ಪ್ರದೇಶವನ್ನು ಒತ್ತಾಯಪೂರ್ವಕವಾಗಿ ಪಡೆಯುವಂತಿಲ್ಲ ಎನ್ನಲಾಗಿದೆ. ಇತ್ತೀಚಿನ ನಂದಿಗ್ರಾಮ ಪ್ರಕರಣದ ಹಿನ್ನೆಲೆಯಲ್ಲಿ ಈ ರೀತಿಯ ನಿರ್ಣಯ ಹೊರಬಿದ್ದಿರುವುದಾಗಿ ಹೇಳಲಾಗುತ್ತಿದೆ. ಆದರೆ ಎಸ್‌ಇಜಡ್‌ ಪ್ರೋತ್ಸಾಹಕ ಕಂಪೆನಿಗಳು ಸ್ವತಃ ರೈತರ ಬಳಿಗೆ ಹೋಗಿ ವ್ಯಾಪಾರ ಕುದುರಿಸಬಹುದಾಗಿದೆ.

ಸಿಪಿಐ (ಎಂ) ಗರಂ

ಈ ನಿರ್ಣಯದಿಂದ ವಾಮ ಪಕ್ಷಗಳು ಕೆಂಡಮಂಡಲವಾಗಿವೆ. ಸಂಸತ್ತಿನ ಸಲಹಾ ಸಮಿತಿಯ ಮುಂದೆ ವಿಶೇಷ ಆರ್ಥಿಕ ವಲಯ ನೀತಿ ಅನುಮೋದನೆಗೊಂಡಿರುವಾಗ ವಾಣಿಜ್ಯ ಸಚಿವಾಲಯ ಸದರಿ ನಿರ್ಣಯವನ್ನು ಪ್ರಕಟಿಸಿರುವುದು ಸರಿಯಲ್ಲ ಎಂದು ಸಿಪಿಐ (ಎಂ)ನ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜ ಗುಡುಗಿದ್ದಾರೆ.

ಆದರೆ ವಾಣಿಜ್ಯ ಸಚಿವಾಲಯದ ನಿರ್ಣಯವೇ ಅಂತಿಮ ಎಂದು ಕೇಂದ್ರ ವಾಣಿಜ್ಯ ಸಚಿವ ಕಮಲ್‌ನಾಥ್‌ ಹೇಳುತ್ತಿದ್ದಾರೆ.

ಸಿಪಿಐ(ಎಂ) ಅಧಿಕೃತವಾಗಿ ತನ್ನ ಅಸಮಧಾನವನ್ನು ತೊಡಿಕೊಂಡಿಲ್ಲವಾದರೂ, ಪಕ್ಷದ ಮೂಲಗಳ ಪ್ರಕಾರ , 2 ಸಾವಿರ ಹೆಕ್ಟರ್‌ ಭೂಮಿ ಪ್ರದೇಶಕ್ಕೆ ಎಸ್‌ಇಜಡ್‌ ಅನ್ನು ಸೀಮಿತಗೊಳಿಸಬೇಕೆಂಬ ಸಿಪಿಐ (ಎಂ) ಮುಂದಿಟ್ಟಿದ್ದ ಬೇಡಿಕೆಗೆ ಬದಲಾಗಿ ಸರ್ಕಾರ 5,000 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಿರುವುದು ಸಿಪಿಐ (ಎಂ)ನ ನಾಯಕರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

(ಏಜನ್ಸೀಸ್‌)

ಪೂರಕ ಓದಿಗೆ
ಕರ್ನಾಟಕದಲ್ಲಿ ‘ಉದ್ದಿಮೆಗಳ ಕಲ್ಯಾಣ’ : ಕೇಂದ್ರ ಅಸ್ತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X