ಕಾಕೋಳಿನಲ್ಲಿ ಶ್ರೀವೇಣುಗೋಪಾಲಸ್ವಾಮಿ ರಥೋತ್ಸವ
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕಿನ ಕಾಕೋಳು ಗ್ರಾಮದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರಥೋತ್ಸವದಲ್ಲಿ ಭಕ್ತಿ-ಶ್ರದ್ಧೆಗಳಿಂದ ಪಾಲ್ಗೊಂಡಿದ್ದರು. ಹೊಸಬಟ್ಟೆ ತೊಟ್ಟ ಹಿರಿಯರು-ಕಿರಿಯರು ಹಬ್ಬದ ಸಡಗರಕ್ಕೆ ಸಂಕೇತವಾಗಿದ್ದರು. ರಥೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರವಹಿಸಲಾಗಿತ್ತು.
ರಥೋತ್ಸವಕ್ಕೂ ಮೊದಲು ವೇಣುಗೋಪಾಲಕೃಷ್ಣ ಸ್ವಾಮಿಯ ಪೂಜೆ ಭಾರೀ ಸಡಗರದಿಂದ ನಡೆಯಿತು. ನಗರಗಳಲ್ಲಿ ನೆಲೆಸಿರುವ ಗ್ರಾಮದ ಜನರು, ರಥೋತ್ಸವದ ನಿಮಿತ್ತ ಊರಿಗೆ ಬಂದು ಸಡಗರದಿಂದ ಭಾಗವಹಿಸಿದ್ದರು. ಆ ಮೂಲಕ ಭಾರತೀಯ ಹಬ್ಬಗಳು ಜನರನ್ನು ಒಂದುಗೂಡಿಸಲು ಹೇಗೆ ವೇದಿಕೆಯಾಗುತ್ತವೆ ಎಂಬುದಕ್ಕೆ ಸಾಕ್ಷಿಯಂತಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications