ಸುದ್ದಿ ತುಣುಕುಗಳು : ಶುಕ್ರವಾರ ಎಲ್ಲೆಲ್ಲಿ ಏನಾಯಿತು?
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದ, ಭಾರತೀಯ ತೈಲ ನಿಗಮದ ಅಧಿಕಾರಿ ಕೋಲಾರದ ಎಸ್.ಮಂಜುನಾಥ್ ಕೊಲೆ ಪ್ರಕರಣ ಒಂದು ಹಂತ ತಲುಪಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖೀಮ್‌ಪುರ ಖೇರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಲಯ 8ಮಂದಿಯನ್ನು ದೋಷಿಗಳೆಂದು ಶುಕ್ರವಾರ ಗುರ್ತಿಸಿದೆ. ಕಲಬೆರಕೆ ಮತ್ತು ಭ್ರಷ್ಠಾಚಾರ ತಡೆಯಲು ಹೋಗಿ ಮಂಜುನಾಥ್, 2005ರ ನ.19ರಲ್ಲಿ ಕೊಲೆಗೀಡಾಗಿದ್ದರು.
*
ಪಾಕಿಸ್ತಾನದ ಕ್ರಿಕೆಟ್ ಕೋಚ್ ಬಾಬ್ ವೂಲ್ಮರ್ ಅವರ ಸಾವನ್ನು, ಕೊಲೆ ಎಂದು ಜಮೈಕಾ ಪೊಲೀಸರು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ವೂಲ್ಮರ್ ಅವರ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅವರ ಡೈರಿ ಕಾಣೆಯಾಗಿದೆ ಎಂಬ ಅಂಶವನ್ನು ಪೊಲೀಸರು ಹೇಳಿದ್ದಾರೆ.
*
ಪ್ರಮೋದ್ ಮಹಾಜನ್‌ಗೆ ಗುಂಡು ಹಾರಿಸಿದ್ದು ಅವರ ಸಹೋದರ ಪ್ರವೀಣ್ ಎಂಬ ವಿಷಯ ಖಚಿತವಾಗಿದೆ. ವಿಚಾರಣೆ ಸಂದರ್ಭದಲ್ಲಿ ಈ ಸಂಗತಿಯನ್ನು ಮಹಾಜನ್ ಪತ್ನಿ ಹೇಳಿದ್ದಾರೆ.
*
ಎಲ್ಲಾ ರೈತರ ಸಾಲ ಮನ್ನಾ ಮಾಡಲು ವಿಧಾನಸಭೆಯಲ್ಲಿ ಶುಕ್ರವಾರ ಒತ್ತಾಯ... ಸರ್ಕಾರಕ್ಕೆ ಪೇಚಾಟ...
*
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಆಪ್ತವಲಯದ ಶಾಸಕ ಬೇಳೂರು ಗೋಪಾಲಕೃಷ್ಣ ರ ದಾರಿ ಬದಲು. ಜೆಡಿಎಸ್ ಸೇರುವುದಾಗಿ ಹೇಳಿಕೆ.
(ದಟ್ಸ್ ಕನ್ನಡ ನ್ಯೂಸ್ ಡೆಸ್ಕ್)












Click it and Unblock the Notifications