ಚಿನ್ನದ ಗಣಿ ಕಾರ್ಮಿಕರ ಗೋಳಿಗೆ ಕಿವಿಕೊಟ್ಟ ಹೈಕೋರ್ಟ್
ಬೆಂಗಳೂರು : ಚಿನ್ನದ ಗಣಿಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಮೊದಲು ಕೆಲಸ ಕಳೆದುಕೊಂಡಿದ್ದಾಯಿತು, ಈಗ ತಮಗೆ ಬರಬೇಕಾದ ಹಣಕ್ಕಾಗಿ ಪರದಾಡುತ್ತಿದ್ದಾರೆ. ಈ ಕಾರ್ಮಿಕರ ರಕ್ಷಣೆಗೆ ಹೈಕೋರ್ಟ್, ಕಡೆಗೂ ಮುಂದಾಗಿದೆ.
ಕೆಜಿಎಫ್‌ನ ಚಿನ್ನದ ಗಣಿ(ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ನೀಡಬೇಕಿರುವ 74.45ಕೋಟಿ ರೂಪಾಯಿ ಬಾಕಿ ಹಣವನ್ನು, ಏಪ್ರಿಲ್ 30ರೊಳಗೆ ನೀಡಬೇಕು ಎಂದು ರಾಜ್ಯ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ. ಕೋರ್ಟ್ ಆದೇಶದಿಂದ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಷ್ಟದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಸಂಸ್ಥೆ ಸ್ಥಗಿತಗೊಂಡಿತ್ತು. ಕೆಲ ನೌಕರರು ಪುನರ್ವಸತಿ ಪ್ಯಾಕೇಜ್ ಕೋರಿ, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications