ಬೆಂಕಿ ಆಕಸ್ಮಿಕ:3ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ನಾಶ
ಬೆಳಗಾವಿ : ಚಿಕ್ಕೋಡಿಯ ದೂಧ್‌ಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ 3ಕೋಟಿ ರೂಪಾಯಿ ಮೌಲ್ಯದ ಸಕ್ಕರೆ ಸುಟ್ಟುಹೋಗಿದೆ.
ಸಕ್ಕರೆ ಮೂಟೆಗಳನ್ನು ವಿದ್ಯುತ್ ಚಾಲಿತ ಟ್ರಾಲಿಗಳಲ್ಲಿ ಕಾರ್ಖಾನೆಯಿಂದ ಹೊರಕ್ಕೊಯ್ಯುತ್ತಿದ್ದಾಗ ಬೆಂಕಿ ತಗುಲಿತು. ಬುಧವಾರ(ಫೆಬ್ರವರಿ 07) ಸಂಭವಿಸಿದ ಈ ಅನಾಹುತದಲ್ಲಿ ಒಟ್ಟು 22,000 ಕ್ವಿಂಟಾಲ್ ಸಕ್ಕರೆ ಸುಟ್ಟಿಹೋಗಿದೆ ಎಂದು ಮೂಲಗಳು ಹೇಳಿವೆ.
ಬೆಂಕಿ ಆರಿಸಲು ಅಗ್ನಿಶಾಮಕದಳ ಸಿಬ್ಬಂದಿ ಆರು ಗಂಟೆಗಳ ಕಾಲ ಸಾಹಸ ನಡೆಸಬೇಕಾಯಿತು. 35,000 ಕ್ವಿಂಟಾಲ್ ಸಕ್ಕರೆ ಸಂಗ್ರಹಿಸಿ ಇಡಲಾಗಿದ್ದ ಇನ್ನೊಂದು ಉಗ್ರಾಣದ ಕಡೆಗೂ ಬೆಂಕಿ ಚಾಚಿಕೊಳ್ಳುವುದರಲ್ಲಿತ್ತು. ಕಾರ್ಖಾನೆ ಕೆಲಸಗಾರರು ತಕ್ಷಣವೇ ಜಾಗೃತರಾಗಿ ಈ ಅನಾಹುತ ತಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.
(ಏಜನ್ಸೀಸ್)











Click it and Unblock the Notifications