ತುಮಕೂರಿನಲ್ಲಿ ಶ್ರೀ ವೀರೇಶಾನಂದರಿಂದ ಉಪನ್ಯಾಸ

ತುಮಕೂರು : ನಗರದ ಸರಸ್‌ ಮಾಧ್ಯಮ ಸಂಪರ್ಕ ಸಂಸ್ಥೆ ಶುಕ್ರವಾರ(ಜ.19) ನಾಲ್ಕನೆಯ ‘ಚಿಂತನ ಚಿಲುಮೆ’ ಉಪನ್ಯಾಸವನ್ನು ಏರ್ಪಡಿಸಿದೆ.

ನಗರದ ಕ್ಯಾತಸಂದ್ರದಲ್ಲಿರುವ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ವಿಶೇಷ ಉಪನ್ಯಾಸ ನೀಡುವರು.

ನಗರದ ಖ್ಯಾತ ವೈದ್ಯರೂ, ಕಸ್ತೂರ್ಬಾ ಆಸ್ಪತ್ರೆಯ ಮುಖ್ಯಸ್ಥರೂ ಆದ ಡಾ. ದುರ್ಗಾದಾಸ್‌ ಆಸ್ರಣ್ಣ ಅಧ್ಯಕ್ಷತೆ ವಹಿಸಲಿದ್ದು, ಗುಬ್ಬಿಯ ಚೆನ್ನಬಸವೇಶ್ವರ ತಾಂತ್ರಿಕ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್‌. ಸುರೇಶ್‌ ಕುಮಾರ್‌ ಮುಖ್ಯಅತಿಥಿಗಳಾಗಿ ಆಗಮಿಸಿಸುವರು ಎಂದು ವ್ಯವಸ್ಥಾಪಕ ಆರ್‌. ವಿಶ್ವನಾಥನ್‌ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ತುಮಕೂರು ನಗರದ ಶ್ರೀ ಶಾರದಾ ವಿದ್ಯಾಲಯದ ಪ್ರಾಚಾರ್ಯರಾದ ಕೆ. ಚಂದ್ರಶೇಖರ್‌ ಅವರು ಹಿಂದೂಸ್ಥಾನಿ ವಾದ್ಯ ಸಂಗೀತ(ಸಿತಾರ್‌) ಕಚೇರಿ ನಡೆಸಿಕೊಡಲಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+