ಸರ್ಕಾರಿ ಬಂಗಲೆಯಲ್ಲಿ ದರ್ಬಾರು; ಬಾಡಿಗೆಗೆ ತಕರಾರು!
ನವದೆಹಲಿ : ರಾಜಧಾನಿಯಲ್ಲಿನ ಸರ್ಕಾರಿ ಬಂಗಲೆಗಳಲ್ಲಿ ಮೆರೆಯುವ ನಮ್ಮ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳಿಗೆ, ಬಾಡಿಗೆ ಕೊಡಲು ಮನಸ್ಸು ಬರುತ್ತಿಲ್ಲ! ಹೀಗಾಗಿ ಬಾಡಿಗೆ ಬಾಕಿ 50ಕೋಟಿ ರೂಪಾಯಿ ಮೀರಿದೆ!
ಇದೆಲ್ಲವನ್ನೂ ಗಮನಿಸಿದ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೂಡಲೇ ಬಾಡಿಗೆ ವಸೂಲಿ ಮಾಡಿ. ಈ ಬಗ್ಗೆ ಮೇ 1ರೊಳಗೆ ವರದಿ ಸಲ್ಲಿಸಬೇಕೆಂದು ಆದೇಶ ನೀಡಿದೆ.
ಬಡ ಬೋರೇಗೌಡ ಸೂರಿಲ್ಲದೇ ಬಳಲುತ್ತಿದ್ದರೆ, ನಮ್ಮ ಗಣ್ಯರು ಸರ್ಕಾರಿ ಬಂಗಲೆಗಳಲ್ಲಿ ಬಾಡಿಗೆ ಕಟ್ಟದೇ, ದರ್ಬಾರು ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಜಯವಾಗಲಿ!
(ಏಜನ್ಸೀಸ್)












Click it and Unblock the Notifications