‘ನಿರಾಕರಣ’ದ ಭೈರಪ್ಪ ಗೆ ಗುಲ್ಬರ್ಗ ವಿವಿ ಡಾಕ್ಟರೇಟ್
ಗುಲ್ಬರ್ಗಾ : ಖ್ಯಾತ ಕಾದಂಬರಿಕಾರ ಎಲ್.ಎಲ್.ಭೈರಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ.
ವಿವಿ ಕುಲಪತಿ ಪ್ರೊ.ಬಿ.ಜಿ.ಮೂಲಿಮನಿ, ಗುರುವಾರ(ಜನವರಿ 11) ನಡೆದ ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಮಾತನಾಡುತ್ತಿದ್ದರು.
ವಿಶ್ವವಿದ್ಯಾಲಯ ಈ ಗೌರವಕ್ಕೆ, ಖ್ಯಾತ ಉದ್ಯಮಿ ಎಸ್.ಎಸ್.ಪಾಟೀಲ್, ದಲಿತ ನಾಯಕ ಶಿವರಾಮ್ ಮೋಘಾ, ಶ್ರೀ ಶಿವಕುಮಾರ ಸ್ವಾಮೀಜಿ, ಕಾದಂಬರಿಕಾರ ಎಲ್.ಎಲ್.ಭೈರಪ್ಪ, ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಮತ್ತು ರಾಯಚೂರಿನ ಹಿರಿಯ ನ್ಯಾಯವಾದಿ ಎಂ.ನಾಗಪ್ಪ ಅವರುಗಳ ಹೆಸರನ್ನು ಶಿಫಾರಸು ಮಾಡಿತ್ತು.
ಈ ಪೈಕಿ, ಎಸ್.ಎಲ್.ಭೈರಪ್ಪ, ನರಸಿಂಹಲು ವಡವಾಟಿ ಹಾಗೂ ಎಂ.ನಾಗಪ್ಪ ಅವರಿಗೆ ಗೌರವ ಪ್ರದಾನ ಮಾಡಲು ರಾಜ್ಯಪಾಲ ಟಿ.ಎನ್.ಚತುರ್ವೇದಿ ಅನುಮತಿ ನೀಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಜನವರಿ 18ರಂದು ನಡೆಯುವ ವಿವಿ ಘಟಿಕೋತ್ಸವದಲ್ಲಿ ಗೌರವ ಪ್ರದಾನ ಮಾಡಲಾಗುವುದು. ಕರ್ನಾಟಕ ಹಾಗೂ ಕೇರಳದ ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎನ್.ಮಳಿಮಠ, ರಾಜ್ಯಪಾಲ ಟಿ.ಎನ್.ಚತುರ್ವೇದಿ, ಉನ್ನತ ಶಿಕ್ಷಣ ಸಚಿವ ಡಿ.ಎಚ್.ಶಂಕರಮೂರ್ತಿ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
(ಏಜನ್ಸೀಸ್)











Click it and Unblock the Notifications