ಬೆಂಗಳೂರಿನ ಜಾಲಹಳ್ಳಿ ಬಳಿ ಪಾಕ್ ಉಗ್ರನ ಬಂಧನ
ಬೆಂಗಳೂರು : ನಿಷೇಧಿತ ಲಷ್ಕರ್-ಇ-ತೊಯಿಬಾ ಸಂಘಟನೆಗೆ ಸೇರಿದ್ದಾನೆ ಎನ್ನಲಾದ ಶಂಕಿತ ಉಗ್ರನನ್ನು ಬಂಧಿಸುವಲ್ಲಿ ನಗರದ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಳ್ಳಾರಿ- ಬೆಂಗಳೂರು ಬಸ್‌ನಲ್ಲಿದ್ದ ಶಂಕಿತ ಉಗ್ರನನ್ನು ಇಮ್ರಾನ್ ಎಂದು ಗುರ್ತಿಸಲಾಗಿದೆ. ಅನುಮಾನದಿಂದ ಜಾಲಹಳ್ಳಿ ಬಳಿ ಗುರುವಾರ(ಜ.04) ರಾತ್ರಿ ಬಸ್ ತಡೆದು ನಿಲ್ಲಿಸಿದ ಡಿಸಿಪಿ ರವಿಕಾಂತೇ ಗೌಡ, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ ಎಕೆ 47, ಗ್ರೆನೇಡುಗಳು, ನಕಾಶೆ ಮತ್ತು ಮಾಹಿತಿ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಐದು ವರ್ಷದಿಂದ ಇಮ್ರಾನ್ ಹೊಸಪೇಟೆಯಲ್ಲಿ ವಾಸವಾಗಿದ್ದನು. ಈತನ ಬಂಧನದಿಂದ ಪ್ರಮುಖ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications