ಪುಣೆ ರೆಸಾರ್ಟ್‌ನಲ್ಲಿ ಕುಮಾರಣ್ಣನ ಜೊತೆ 66 ಶಾಸಕರು!
ಬೆಂಗಳೂರು : ಕರ್ನಾಟಕದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಿವಾರಿಸಿಕೊಳ್ಳಲು ಕುಮಾರಣ್ಣ ಮತ್ತು ಅವರ 66ಬೆಂಬಲಿತ ಶಾಸಕರು ಪುಣೆಗೆ ಹಾರಿದ್ದಾರೆ. ಇದು ರೆಸಾರ್ಟ್ ರಾಜಕೀಯದ ಮುಂದುವರಿದ ಭಾಗ.
ಜನತಾದಳ(ಎಸ್) ಪಕ್ಷದ ಕಾರ್ಯತಂತ್ರದ ವಿಮರ್ಶೆ ಹಾಗೂ ಮುಂದಿನ ಕಲಾಪಗಳ ಬಗ್ಗೆ ಚಿಂತನೆ ನಡೆಸಲು ಮೂರು ದಿನದ ಮಟ್ಟಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಬೆಂಬಲಿತ ಶಾಸಕರೊಂದಿಗೆ, ಇಂದಿನಿಂದ ಪುಣೆಯ ಅಂಬರ್ ವ್ಯಾಲಿ ರೆಸಾರ್ಟ್‌ನಲ್ಲಿ ತಂಗಲಿದ್ದಾರೆ.
ಸಚಿವ ಸ್ಥಾನದಿಂದ ವಂಚಿತರಾದ ಕೂಡ್ಲಿಗಿ ಶಾಸಕ ಸಂತೋಷ್ ಲಾಡ್ ಹಾಗೂ ಇತ್ತೀಚೆಗೆ ರಾಜೀನಾಮೆ ನೀಡಿದ ಜಮೀರ್ ಅಹಮದ್ ಪುಣೆಯ ಹಾದಿಯನ್ನು ತುಳಿದಿಲ್ಲದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಸಂತೋಷ್ ಲಾಡ್ ಮುಂಬೈನಲ್ಲಿ ಉಳಿದಿದ್ದಾರೆ ಹಾಗೂ ಜಮೀರ್ ದುಬೈ ಹಾರಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಪಕ್ಷದ ಬಲವರ್ಧನೆಗೆ ಹಾಗೂ ಕೆಲ ಮುಖ್ಯ ನಿರ್ಧಾರಗಳ ಬಗ್ಗೆ ಚರ್ಚಿಸಲು ಪುಣೆಗೆ ಹೋಗುತ್ತಿದ್ದೇವೆ. ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳಿಗೆ ನೇಮಕಾತಿ ಮಾಡುವ ಬಗ್ಗೆ ಚರ್ಚಿಸಲಾಗುವುದು. ಮಾಧ್ಯಮಗಳಿಂದ ಸಭೆಯನ್ನು ದೂರ ಇಡಲು ಪುಣೆಯನ್ನು ಅಯ್ಕೆ ಮಾಡಲಾಯಿತು. ಸರಕಾರದ ಪ್ರಗತಿ ಪರಿಶೀಲನೆ ಹಾಗೂ ಕೈಗೊಂಡಿರುವ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳ ಸಚಿವಾಲಯ ಮಾಹಿತಿ ನೀಡಿದೆ.
(ಯುಎನ್‌ಐ)












Click it and Unblock the Notifications